ಮನೋರಂಜನೆ

ಮತ್ತೆ ಮಿಸ್ ಯೂನಿವರ್ಸ್‌ಗೆ ಹೊರಟ ಸುಶ್ಮಿತಾ ಸೇನ್

Pinterest LinkedIn Tumblr


ಬಾಲಿವುಡ್ ನಟಿ ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ಮತ್ತೆ 23 ವರ್ಷಗಳ ಬಳಿಕ ಫಿಲಿಪ್ಪೈನ್ಸ್‌ಗೆ ಹೊರಟಿದ್ದಾರೆ. ಸುಮಾರು 23 ವರ್ಷಗಳ ಹಿಂದೆ ಇದೇ ಫಿಲಿಪ್ಪೈನ್ಸ್ ನಲ್ಲಿ ಮಿಸ್ ಯೂನಿವರ್ಸ್ ಆಗಿ ಸುಶ್ಮಿತಾ ಆಯ್ಕೆಯಾಗಿದ್ದರು.

ಈಗ 65ನೇ ಆವೃತ್ತಿಗೆ ತೀರ್ಪುಗಾರರಾಗಿ ಮತ್ತೆ ಫಿಲಿಪ್ಪೈನ್ಸ್‌ಗೆ ಹೊರಟಿದ್ದಾರೆ. ಸ್ವತಃ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ ಸುಶ್ಮಿತಾ ಸೇನ್. ಈ ಬಗ್ಗೆ ನಾನೂ ಅಷ್ಟೇ ಎಕ್ಸೈಟ್ ಆಗಿದ್ದೇನೆ. 23 ವರ್ಷಗಳ ಬಳಿಕ ಮತ್ತೆ ಮನೆಗೆ ಹಿಂತಿರುಗುತ್ತಿರುವ ಬಗ್ಗೆ ಸಾಕಷ್ಟು ಖುಷಿಯಾಗಿದೆ ಎಂದಿದ್ದಾರೆ.

ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಸುಶ್ಮಿತಾ ಸೇನ್ ಅವರದು. ಆ ಬಳಿಕ ಬಾಲಿವುಡ್‌ನಲ್ಲೂ ಮಿಂಚಿದ ತಾರೆ. ಜನವರಿ 30ರಂದು ಮಾಲ್ ಆಫ್ ಅರೇನಾದಲ್ಲಿ ಈ ಸ್ಪರ್ಧೆ ನಡೆಯಲಿದ್ದು, 22ರ ಹರೆಯದ ರೋಶ್ಮಿತಾ ಹರಿಮೂರ್ತಿ ಭಾರತದಿಂದ ಸ್ಪರ್ಧಿಸುತ್ತಿದ್ದಾರೆ.

Comments are closed.