ಮನೋರಂಜನೆ

ಬಾಲಿವುಡ್ ನಟಿ ಕರೀನಾಳನ್ನು ಮದುವೆಯಾಗಲು ಬಯಸಿದ್ದರಂತೆ ಈ ರಾಜಕಾರಣಿ!

Pinterest LinkedIn Tumblr


ಮುಂಬೈ(ಜ.08): ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಅಮ್ಮನಾಗಿದ್ದರೂ, ಕರೀನಾ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಸದ್ಯಕ್ಕೆ ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಕೂಡ ಕರೀನಾಳ ದೊಡ್ಡ ಅಭಿಮಾನಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ಮತ್ತೊಂದು ಶಾಕಿಂಗ್ ನ್ಯೂಸ್’ನ್ನೂ ಇವರು ಬಿಚ್ಚಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂದು ಅಖಿಲೇಶ್ ಯಾದವ್ ಬಳಿ ಕೇಳಿದಾಗ ಕರೀನಾ ಹೆಸರು ಹೇಳಿದ್ದಾರೆ. ಅಲ್ಲದೆ ಕರೀನಾಳೊಂದಿಗೆ ನಾನು ಮದುವೆಯಾಗುವ ಕನಸು ಕಂಡಿದ್ದೆ, ಆದ್ರೆ ತಂದೆ ಮುಲಾಯಂ ಸಿಂಗ್ ಯಾದವ್ ಇದಕ್ಕೆ ಒಪ್ಪಲಿಲ್ಲ ಎಂದು ನಗುತ್ತಾ ಉತ್ತರ ನೀಡಿದ್ದಾರೆ.

Comments are closed.