ಮನೋರಂಜನೆ

ಸ್ವಾತಂತ್ರ್ಯ ಪೂರ್ವದ ಪ್ರೀತಿ ಮತ್ತು ಹೋರಾಟಗಳ ಬಾಲಿವುಡ್ ಚಿತ್ರ ರಂಗೂನ್‌

Pinterest LinkedIn Tumblr


ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಪ್ರೀತಿ ಮತ್ತು ಹೋರಾಟದ ಕಥೆ ರಂಗೂನ್‌. ಕಂಗನಾ ಅಭಿನಯದ ರಂಗೂನ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ದೇಶದ ಸ್ವಾತಂತ್ರ್ಯ ಹೋರಾಟದ ಸಮಯ, ಮತ್ತೊಂದೆಡೆ ಯುದ್ಧ. ಹೋರಾಟಗಳ ನಡುವೆ ಚಿಗುರೊಡೆಯುವ ಪ್ರೀತಿಗೆ ಎರಡು ಹಾದಿ! ಚಿತ್ರದ ಬಹುತೇಕ ಕಥೆ ಮ್ಯಾನ್ಮಾರ್‌ ರಾಜಧಾನಿಯಾಗಿದ್ದ ‘ರಂಗೂನ್‌’ನಲ್ಲಿ ನಡೆಯುತ್ತದೆ.

ಹೈದರ್‌, ಬ್ಲೂ ಅಂಬ್ರೆಲಾ ದಂತಹ ಸಿನಿಮಾ ನಿರ್ದೇಶಿಸಿರುವ ವಿಶಾಲ್‌ ಭಾರದ್ವಾಜ್‌ ರಂಗೂನ್‌ನ ಸೂತ್ರಧಾರ. ಸಿನಿಮಾದಲ್ಲಿ ಕಂಗನಾಗೆ ಸೈಫ್‌ ಅಲಿ ಖಾನ್‌ ಹಾಗೂ ಶಾಹಿದ್‌ ಕಪೂರ್‌ ಇಬ್ಬರು ನಾಯಕರು.

ಫೆಬ್ರವರಿ 24ರಂದು ‘ರಂಗೂನ್‌’ ತೆರೆಕಾಣಲಿದೆ.

Comments are closed.