ಮನೋರಂಜನೆ

ಇಸ್ತಾನ್ ಬುಲ್ ನೈಟ್ ಕ್ಲಬ್ ಮೇಲೆ ದಾಳಿಯಲ್ಲಿ ಬಾಲಿವುಡ್ ನಿರ್ಮಾಪಕ ಅಬೀಸ್ ರಿಜ್ವಿ ಸಾವು

Pinterest LinkedIn Tumblr

abis_1483332562

ನವದೆಹಲಿ: ಇಸ್ತಾನ್ ಬುಲ್ ನೈಟ್ ಕ್ಲಬ್ ಮೇಲೆ ದಾಳಿ ನಡೆದು 39 ಮಂದಿ ಅಸುನೀಗಿದವರಲ್ಲಿ ಇಬ್ಬರು ಭಾರತೀಯರು ಒಳಗೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಹೊಸ ವರ್ಷದ ದಿನದಂದು ಇಸ್ತಾಂಬುಲ್’ನ ನೈಟ್ ಕ್ಲಬ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಬಾಲಿವುಡ್ ನಿರ್ಮಾಪಕ ಅಬೀಸ್ ರಿಜ್ವಿ ಮೃತಪಟ್ಟಿದ್ದಾರೆ. ಡಿಸೆಂಬರ್ 31 ರಂದು ಇಸ್ತಾಂಬುಲ್’ನಲ್ಲಿ ನಾಗರಿಕರು ಸಂಭ್ರಮಾಚರಣೆಯಲ್ಲಿದ್ದಾಗ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ್ದರು. ಈ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಮಹಾರಾಷ್ಟ್ರದ ಮಾಜಿ ರಾಜ್ಯಸಭಾ ಸದಸ್ಯ ಡಾ.ಅಕ್ತರ್ ಅಸನ್ ರಿಜ್ವಿ ಅವರ ಪುತ್ರರಾದ ಅಬೀಸ್ ರಿಜ್ವಿ ಅವರು ‘ರೋರ್:ಟೈಗರ್ ಆಫ್ ದಿ ಸುಂದರ್’ಬನ್ಸ್, ಹಿ ಮ್ಯಾನ್ ಹಾಗೂ ಟಿ ಫಾರ್ ತಾಜ್ ಮಹಲ್ ಸಿನಿಮಾಗಳನ್ನು ನಿರ್ಮಿಸಿದ್ದರು. ರಿಜ್ವಿ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. ಇಬ್ಬರು ಭಾರತೀಯರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ‘ ಟರ್ಕಿಯ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದು ಶೀಘ್ರದಲ್ಲಿಯೇ ಇಬ್ಬರ ಮೃತದೇಹಗಳನ್ನು ಭಾರತಕ್ಕೆ ತೆಗೆದುಕೊಂಡು ಬರಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

Comments are closed.