ಮನೋರಂಜನೆ

ಅಮೀರ್ ಖಾನ್’ರನ್ನು ನೂತನ ರಾಜ್ ಕಪೂರ್ ಎಂದು ರಿಷಿ ಕಪೂರ್ ಹೇಳಿದ್ದೇಕೆ…?

Pinterest LinkedIn Tumblr

aamir-khan-rishi-kapoor

ಮುಂಬೈ: ಇತ್ತೀಚಿಗೆ ಬಿಡುಗಡೆಯಾದ ಅಮೀರ್ ಖಾನ್ ಅವರ ‘ದಂಗಲ್’ ಸಿನೆಮಾವನ್ನು ಪ್ರಶಂಸಿಸಿರುವ ಹಿರಿಯ ನಟ ರಿಷಿ ಕಪೂರ್, ಅವರನ್ನು ನೂತನ ‘ರಾಜ್ ಕಪೂರ್’ ಎಂದಿದ್ದಾರೆ.

ಕುಸ್ತಿ ಪಟು ಮಹಾವೀರ್ ಸಿಂಗ್ ಪೊಘಾಟ್ ಅವರ ಜೀವನಾಧಾರಿತ ಸಿನೆಮಾ ‘ದಂಗಲ್’ ಡಿಸೆಂಬರ್ ೨೩ ರಂದು ಬಿಡುಗಡೆಯಾಗಿತ್ತು ಮತ್ತು ಮೊದಲ ಮೂರೂ ದಿನಗಳಲ್ಲೇ ೧೦೦ ಕೋಟಿಗಿಂತಲೂ ಹೆಚ್ಚು ಗಳಿಸಿತ್ತು.

ಅಮೀರ್ ಖಾನ್ ಅವರನ್ನು ಪ್ರಶಂಸಿಸಲು ಟ್ವಿಟ್ಟರ್ ಮೊರೆ ಹೋಗಿರುವ ರಿಷಿ ಕಪೂರ್, ಅವರನ್ನು ತಮ್ಮ ತಂದೆ-ಬಾಲಿವುಡ್ ದಂತಕತೆ ದಿವಂಗತ ರಾಜ್ ಕಪೂರ್ ಅವರಿಗೆ ಹೋಲಿಸಿದ್ದಾರೆ.

“ಅಮೀರ್ ಖಾನ್, ದಂಗಲ್ ನೋಡಿದೆ. ನನಗೆ ನೀವು ನೂತನ ರಾಜ್ ಕಪೂರ್ – ನಟ, ನಿರ್ದೇಶಕ, ನಿರ್ಮಾಪಕ, ನಮ್ಮ ಸಮಯದ ಷೋಮ್ಯಾನ್, ನಿಜವಾಗಿಯೂ ಅದ್ಭುತ. ನಿಮಗೆ ದೇವರು ಒಳ್ಳೆಯದು ಮಾಡಲಿ” ಎಂದು ರಿಷಿ ಟ್ವೀಟ್ ಮಾಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ಈಗಾಗಲೇ ೨೦೦ ಕೋಟಿಗಿಂತಲೂ ಹೆಚ್ಚು ಗಳಿಕೆ ಕಂಡಿದೆ.

Comments are closed.