ಮನೋರಂಜನೆ

ದೀಪಿಕಾ ಪಡುಕೋಣೆ ಅಭಿನಯದ ಹಾಲಿವುಡ್ ಚಿತ್ರ xXx ಮೊದಲು ಭಾರತದಲ್ಲಿ ಬಿಡುಗಡೆ

Pinterest LinkedIn Tumblr

xxx
ಸ್ಯಾಂಡಲ್‍ವುಡ್‌ನಿಂದ ಬಾಲಿವುಡ್‌ಗೆ ಹೋಗಿ ಅಲ್ಲಿಂದ ಹಾಲಿವುಡ್‍ಗೆ ನೆಗೆದಿರುವ ಬೆಡಗಿ ದೀಪಿಕಾ ಪಡುಕೋಣೆ. ಅವರ ಚೊಚ್ಚಲ ಹಾಲಿವುಡ್ ಚಿತ್ರ xXx ಮೊದಲು ಭಾರತದಲ್ಲಿ ಬಿಡುಗಡೆಯಾಗಿ ಆ ಬಳಿಕ ಜಗತ್ತಿನ ಉಳಿದ ಕಡೆ ತೆರೆಕಾಣಲಿದೆಯಂತೆ.

ಇದೇ ಜನವರಿ 14ಕ್ಕೆ ಚಿತ್ರಮಂದಿರಗಳಲ್ಲಿ ದೀಪಿಕಾ ಅಭಿನಯದ ಹಾಲಿವುಡ್ ಚಿತ್ರ xXx ರಿಟರ್ನ್ ಆಫ್ ಕ್ಸಾಂಡಲ್ ಕೇಜ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಟ್ವೀಟಿಸಿ ದೀಪಿಕಾ ಪಡುಕೋಣೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಲಿವುಡ್‌‍ನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ ದೀಪಿಕಾ ಅಭಿಮಾನಿಗಳ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ.

ಚಿತ್ರದಲ್ಲಿ ದೀಪಿಕಾ ಹೆಸರು ಸೆರೆನಾ ಉಂಗರ್ ಅಂತ. ಹಾಲಿವುಡ್‌ನ ಖ್ಯಾತ ನಟ ವಿನ್ ಡೀಸೆಲ್ ನಾಯಕನಟನಾಗಿದ್ದು ದೀಪಿಕಾ ಈ ಸಿನಿಮಾದಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬುದು ಜನವರಿ 14ರಂದು ತಿಳಿಯಲಿದೆ. ಡಿಜೆ ಕಾರುಸೋ ನಿರ್ದೇಶಿಸರುವ ‘xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್’, ೨೦೦೨ ರಲ್ಲಿ ಬಿಡುಗಡೆಯಾದ ‘xXx ‘ ಮತ್ತು ೨೦೦೫ ರಲ್ಲಿ ಬಿಡುಗಡೆಯಾದ ‘xXx : ಸ್ಟೇಟ್ ಆಫ್ ಯೂನಿಯನ್’ ಸಿನೆಮಾ ಸರಣಿಗಳ ಮುಂದಿನ ಭಾಗ. ಈ ಸಿನೆಮಾದಲ್ಲಿ ರೂಬಿ ಜೋಸ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡಾನ್ನಿ ಯೆನ್ ಮತ್ತು ಟೋನಿ ಜಾ ಕೂಡ ನಟಿಸಿದ್ದಾರೆ.

Comments are closed.