ಮನೋರಂಜನೆ

ದಂಗಲ್ ನೋಡಿ ಸೆಹ್ವಾಗ್, ಅಮೀರ್ ಖಾನ್’ಗೆ ಕೊಟ್ಟ ಸಲಹೆ ಏನು>?

Pinterest LinkedIn Tumblr

dangale
ಕ್ರಿಕೆಟ್’ನಿಂದ ನಿವೃತ್ತಿಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸೆಹ್ವಾಗ್ ಟ್ವೀಟ್’ಗಳನ್ನು ನೀವು ಸಾಕಷ್ಟು ಬಾರಿ ಎಂಜಾಯ್ ಮಾಡಿರುತ್ತೀರ. ಅದು ಹುಟ್ಟುಹಬ್ಬವೇ ಇರಲಿ, ಕ್ರಿಕೆಟ್ ದಾಖಲೆ ನಿರ್ಮಾಣವಾದಾಗಲೇ ಇರಲಿ, ಸಾಮಾಜಿಕ ಕಳಕಳಿಯೇ ಇರಲಿ. ಪ್ರತಿಬಾರಿಯೂ ಒಂದಿಲ್ಲೊಂದು ವಿಚಿತ್ರವಾದ ಟ್ವೀಟ್ ಮಾಡಿ ಗಮನ ಸೆಳೆಯುವ ಸೆಹ್ವಾಗ್ ಈ ಬಾರಿ ಮತ್ತೆ ಟ್ವೀಟ್’ನಲ್ಲಿ ಸದ್ದು ಮಾಡಿದ್ದಾರೆ.
ಇತ್ತೀಚೆಗಷ್ಟೇ ತೆರೆಕಂಡ ಬಹುನಿರೀಕ್ಷಿತ ‘ದಂಗಲ್’ ಸಿನೆಮಾ ನೋಡಲು ಸೆಲಿಬ್ರಿಟಿಗಳಿಗೆ ವಿಶೇಷ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ದಂಗಲ್ ನೋಡಿದ ಸೆಹ್ವಾಗ್, ಅಮೀರ್ ಖಾನ್’ಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಸಿನೆಮಾದ ಕೊನೆಯಲ್ಲಿ ಕಣ್ಣೀರು ಒರೆಸಿಕೊಳ್ಳಲು ನಿಮ್ಮ ಬಳಿ ಅಂಗವಸ್ತ್ರವಿತ್ತು, ನೀವೂ ನಮಗೆ ಟಿಕೆಟ್ ಜೊತೆಗೆ ಟಿಸ್ಯೂ ಪೇಪರ್ ಕೂಡ ನೀಡಬೇಕಿತ್ತು ಎಂದು ವಿನಂತಿಸಿಕೊಂಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Thank u @aamir_khan fr d special #Dangal screening.U had an angocha to wipe ur tears in the end,shud give free tissues with tickets for us . pic.twitter.com/b1nSa4ZxM8
— Virender Sehwag (@virendersehwag) December 25, 2016

Comments are closed.