ಮನೋರಂಜನೆ

ಬಿಗ್‌ಬಾಸ್ ಮನೆಯಲ್ಲಿ ನಟಿ ಮಾಳವಿಕಾ ಬಗ್ಗೆ ಓಂಪ್ರಕಾಶ್‌ಗಿದ್ದ ಸಿಟ್ಟೇನು…? ಸುದೀಪ್ ಮುಂದೆ ಹೇಳಿದ್ದು ಏನು…?

Pinterest LinkedIn Tumblr

omprakash

ಬಿಗ್‌ಬಾಸ್ ಮನೆಯಲ್ಲಿ ನಟಿ ಮಾಳವಿಕಾ ಬಗ್ಗೆ ಇದ್ದ ಸಿಟ್ಟನ್ನು ಓಂಪ್ರಕಾಶ್ ಹೊರಹಾಕಿದ್ದಾರೆ. ತನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದ ಮಾಳವಿಕಾ ಬಗ್ಗೆ ನನಗೆ ಸಿಟ್ಟಿದೆ ಎಂದು ಕಿಚ್ಚ ಸುದೀಪ್ ಮುಂದೆ ಓಂಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

ಅನಾರೋಗ್ಯದ ಕಾರಣ ಬಿಗ್‌ಬಾಸ್ ಮನೆಯಿಂದ ನೇರವಾಗಿ ಹಾಸ್ಪಿಟಲ್‌ ಸೇರಿದ್ದ ಓಂಪ್ರಕಾಶ್‌ ಅವರು ಅದೇ ವಾರ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದರು. ಆದರೆ ಅವರು ಸುದೀಪ್ ನಡೆಸಿಕೊಡುವ ‘ಸೂಪರ್‌ ಸಂಡೇ ವಿಥ್‌ ಸುದೀಪ್‌’ ಕಾರ್ಯಕ್ರಮಕ್ಕೆ ಬಾರಲು ಆಗದ ಕಾರಣ ಈ ವಾರ ಬಿಗ್‌ಬಾಸ್‌ ವೇದಿಕೆಗೆ ಬಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಬಿಗ್‌ಬಾಸ್‌ ಮನೆಯಲ್ಲಿನ ಹೆಣ್ಣುಮಕ್ಕಳಿಗೆ ನನ್ನ ಬಗ್ಗೆ ಮಾಳವಿಕಾ ತಪ್ಪಾಗಿ ಹೇಳಿಕೊಡುತ್ತಿದ್ದಾರೆ. ನಾನು ಆ ತರಹದ ವ್ಯಕ್ತಿ ಅಲ್ಲ. ನಿಜವಾದ ಓಂಪ್ರಕಾಶ್‌ರನ್ನ ಜನಕ್ಕೆ ತೋರಿಸಿದ್ದು ಬಿಗ್‌ಬಾಸ್‌. ಅವರಿಗೆ ತುಂಬ ಧನ್ಯವಾದಗಳು ಎಂದು ಹೇಳಿದರು.

ಇದೇ ವೇಳೆಯಲ್ಲಿ ಒಂದು ಇಂಟರೆಸ್ಟಿಂಗ್‌ ವಿಷಯವನ್ನೂ ಬಿಚ್ಚಿಟ್ಟರು ಓಂಪ್ರಕಾಶ್‌. ಭವ್ಯಾ ಅವರನ್ನ ಪ್ರೀತಿಸಿ ಮದುವೆಯಾಗಿದ್ದ ಓಂಪ್ರಕಾಶ್‌, ಪ್ರಾರಂಭದಲ್ಲಿ ತುಂಬ ತೊಂದರೆ ಅನುಭವಿಸಿದರಂತೆ. ಆಗ ಅವರಿಗೆ ಸಹಾಯ ಮಾಡಿದ್ದು ಕಿಚ್ಚ ಸುದೀಪ್‌ ಎಂದು ಹೇಳಿಕೊಂಡರು. ‘ಹುಚ್ಚ’ ಚಿತ್ರೀಕರಣದ ಸಂದರ್ಭದಲ್ಲಿ ಭವ್ಯಾ ಮತ್ತು ಓಂಪ್ರಕಾಶ್‌ ನಡುವೆ ಪ್ರೇಮಾಂಕುರವಾಗಿ ಅದು ಮದುವೆಯ ತನಕ ಬಂದು ನಿಲ್ಲಲು ಸುದೀಪ್‌ ಕಾರಣ ಎಂದು ಹೇಳಿದರು.

Comments are closed.