ಮನೋರಂಜನೆ

ಶೂಟಿಂಗ್ ವೇಳೆ ಬಿದ್ದು ಗಾಯಗೊಂಡ ರಜನಿಕಾಂತ್

Pinterest LinkedIn Tumblr

rajinikanth

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರೋಬೋ 2.0 ಚಿತ್ರದ ಶೂಟಿಂಗ್ ವೇಳೆ ಬಿದ್ದು ಸಣ್ಣ ಗಾಯಕ್ಕೆ ಒಳಗಾಗಿದ್ದಾರೆ.

ಶುಕ್ರವಾರ ರಾತ್ರಿ ಚೆನ್ನೈ ಹೊರವಲಯದ ಕೆಲಂಬಕ್ಕಂ ಎಂಬಲ್ಲಿ ಶೂಟಿಂಗ್ ಮಾಡುತ್ತಿರುವಾಗ ರಜನಿ ಬಿದ್ದಿದ್ದು ಬಲಗಾಲಿನ ಮಂಡಿಗೆ ಸಣ್ಣ ಗಾಯವಾಗಿದೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ರಜನಿಕಾಂತ್ ಸೇಫ್ ಆಗಿದ್ದಾರೆ ಎಂದು ಹೇಳಿರೋ ಚಿತ್ರತಂಡ ವಿಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ನೂರಾರು ಅಭಿಮಾನಿಗಳು ಜಮಾಯಿಸಿ ತಲೈವಾಗೆ ಜೈಕಾರ ಕೂಗೋದನ್ನ ವಿಡಿಯೋದಲ್ಲಿ ನೋಡಬಹುದು.

2.0 ಚಿತ್ರ ರೋಬೋ ಸಿನಿಮಾದ ಮುಂದುವರಿದ ಭಾಗ. 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಬಾಲಿವುಡ್ ಸ್ಟಾರ್ ಅಕ್ಷಯ್‍ಕುಮಾರ್ ಹಾಗೂ ಏಮಿ ಜಾಕ್‍ಸನ್ ಸಹ ರಜನಿ ಜೊತೆ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತವಿದ್ದು, ಹಿರಿಯ ನಿರ್ದೇಶಕ ಶಂಕರ್ ಈ ಚಿತ್ರವನ್ನ ನಿರ್ದೇಶಿಸ್ತಿದ್ದಾರೆ.

Comments are closed.