ಮನೋರಂಜನೆ

ಅಮೀರ್ ಖಾನ್ ರ ಸಿಗರೇಟ್ ಸೇವನೆಯನ್ನು ಇಷ್ಟಪಡದ ಪುತ್ರ!

Pinterest LinkedIn Tumblr

aamir-khanಮುಂಬೈ: ಯಾವುದೇ ಸಿನಿಮಾ ಬಿಡುಗಡೆಯಾಗುವ ಮೊದಲು ಒತ್ತಡ ಕಡಿಮೆ ಮಾಡಿಕೊಳ್ಳಲು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸಿಗರೇಟ್ ಸೇದಲು ಪ್ರಾರಂಭಿಸುತ್ತಾರಂತೆ. ಆದರೆ ಪುತ್ರ ಆಝಾದ್ ಖಾನ್ ಗೆ ಅಪ್ಪ ಸಿಗರೇಟ್ ಸೇದುವುದು ಇಷ್ಟವಿಲ್ಲವಂತೆ.

ಅಮೀರ್ ಖಾನ್ ಪ್ರಕಾರ ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದೇನೋ ಸತ್ಯ. ಆದರೆ ಅದರಿಂದ ಭಯ, ಹಿಂಜರಿಕೆ ಕಡಿಮೆ ಮಾಡಬಹುದಂತೆ. ತಮ್ಮ ಎಲ್ಲಾ ಸಿನಿಮಾ ಬಿಡುಗಡೆಯಾಗುವ ಮೊದಲು ಅಮೀರ್ ಗೆ ಏನೋ ಒಂಥರಾ ಹಿಂಜರಿಕೆಯಾಗುತ್ತದೆ. ಅದನ್ನು ನಿವಾರಿಸಲು ಈ ಸಿಗರೇಟ್ ನೆರವಾಗುತ್ತದಂತೆ.

ಧೂಮ್ 3, ಪಿಕೆ, ತಲಾಶ್ ಮುಂತಾದ ಸಿನಿಮಾ ಬಿಡುಗಡೆಯಾಗುವ ಕೆಲ ದಿನಗಳ ಮೊದಲೂ ಅಮೀರ್ ಇದೇ ರೀತಿ ಸಿಗರೇಟ್ ಸೇದುತ್ತಿದ್ದರಂತೆ. ಇದೀಗ ದಂಗಲ್ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವುದು ಅಮೀರ್ ಒತ್ತಡದಲ್ಲಿದ್ದಾರೆ.

ಆದರೆ ಪುತ್ರ ಆಝಾದ್ ಗೆ ಅಪ್ಪ ಸಿಗರೇಟ್ ಸೇದುವುದು ಸುತರಾಂ ಇಷ್ಟವಿಲ್ಲವಂತೆ. ಹೀಗಾಗಿ ತಪ್ಪಿಯೂ ಮಗನ ಎದುರು ಸಿಗರೇಟ್ ಸೇದಲ್ವಂತೆ ದಂಗಲ್ ಸ್ಟಾರ್.

Comments are closed.