ಮನೋರಂಜನೆ

‘ಓಂ ನಮೋ ವೆಂಕಟೇಶಾಯ’ ತೆಲುಗು ಚಿತ್ರದಲ್ಲಿ 14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ ನಟಿ!

Pinterest LinkedIn Tumblr

gold_lehengaಹೈದರಾಬಾದ್: ನಾಗಾರ್ಜುನ ನಾಯಕನಾಗಿ ಅಭಿನಯಿಸುತ್ತಿರುವ ‘ಓಂ ನಮೋ ವೆಂಕಟೇಶಾಯ’ ತೆಲುಗು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಾಯಕಿ ಪ್ರಗ್ಯಾ ಜೈಸ್ವಾಲ್ ಬರೋಬ್ಬರಿ 14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ್ದು, ಫಸ್ಟ್ ಲುಕ್‍ನಲ್ಲಿ ಪ್ರಗ್ಯಾ ಬಂಗಾರದ ಚೆಲುವೆಯಾಗಿ ಮಿಂಚಿದ್ದಾರೆ.

ಸಿನಿಮಾದ ಹಾಡೊಂದರಲ್ಲಿ ನಾಯಕಿ ಈ ಲೆಹೆಂಗಾ ಧರಿಸಿದ್ದು, ಇದು ಅಪ್ಪಟ ಬಂಗಾರದಿಂದ ಮಾಡಿದ ಲೆಹೆಂಗಾ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ .

ರಾಘವೇಂದ್ರ ರಾವ್ ನಿರ್ದೇಶನದ ಓಂ ನಮೋ ವೆಂಕಟೇಶಾಯ ಚಿತ್ರ ಭಕ್ತಿ ಪ್ರಧಾನ ಚಿತ್ರವಾಗಿದ್ದು, ಪ್ರಗ್ಯಾ ಜೈಸ್ವಾಲ್ ಮತ್ತು ಅನುಷ್ಕಾ ಶೆಟ್ಟಿ ನಾಯಕಿಯರಾಗಿದ್ದಾರೆ.

ವೆಂಕಟೇಶ್ವರ ದೇವರ ಭಕ್ತನಾದ ಹಾತಿ ರಾಮ್ ಬಾಬಾ ಅವರ ಜೀವನಾಧರಿತ ಕತೆ ಇದಾಗಿದ್ದು, ಮುಂದಿನ ವರ್ಷ ತೆರೆಕಾಣಲಿದೆ.

Comments are closed.