ಮನೋರಂಜನೆ

ದುರಂತ ಸಂಭಸಿದ ತಿಪ್ಪಗೊಂಡನಹಳ್ಳಿ ಜಲಾಯಶಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್

Pinterest LinkedIn Tumblr

uday-anil

ರಾಮನಗರ: ತಿಪ್ಪಗೊಂಡನಹಳ್ಳಿ ಜಲಾಯಶದಲ್ಲಿ ಸೋಮವಾರ ನಡೆದ ದುರಂತ ಇಡೀ ಚಿತ್ರರಂಗಕ್ಕೆ ದೊಡ್ಡ ಎಚ್ಚರಿಕೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ದುರಂತ ನಡೆದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಇಂದು ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್ ಅವರು ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ದುರಂತ ಇಡೀ ಚಿತ್ರರಂಗಕ್ಕೆ ದೊಡ್ಡ ಎಚ್ಚರಿಕೆಯ ಕರೆಘಂಟೆಯಾಗಬೇಕು. ಸಾಹಸ ಮಾಡುವಾಗ ಅನಿರೀಕ್ಷಿತ ದುರಂತ ನಡೆದು ಹೋಗಿದೆ. ಆದರೆ ನಾನು ಹೇಳುವುದೇನು ಎಂದರೆ ನಮಗೆ ಸಾಧ್ಯವಾಗದ ಕೆಲಸವನ್ನು ನಾವು ಎಂದಿಗೂ ಮಾಡಲೇಬಾರದು. ಹೀರೋಗಳಾಗಲಿ ಅಥವಾ ಸಹನಟರಾಗಲಿ ಎಲ್ಲರೂ ಒಂದೇ ಎಂದು ಹೇಳಿದರು.

ನಾನೂ ಕೂಡ ಈ ಹಿಂದೆ ಮೇಲಿನಿಂದ ನೀರಿಗೆ ಜಂಪ್ ಮಾಡಿದ್ದೆ. ಆದರೆ ಆಗ ಸೂಕ್ತ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗಿತ್ತು. ಇಲ್ಲೂ ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಎಲ್ಲೋ ಒಂದು ಲೋಪಸಂಭವಿಸಿ ದುರಂತ ನಡೆದಿದೆ. ಇದಕ್ಕೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ ಎಂದು ಶಿವರಾಜ್ ಕುಮಾರ್ ಹೇಳಿದರು.

ಅಂತೆಯೇ ಮೃತ ಉದಯ್ ಮತ್ತು ಅನಿಲ್ ಅವರ ಕುಟುಂಬದ ಕುರಿತು ಮಾತನಾಡಿದ ಶಿವರಾಜ್ ಕುಮಾರ್ ಅವರು, ನಾವೀಗ ಎರಡು ಅಮೂಲ್ಯ ರತ್ನಗಳನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬವನ್ನು ನೆನೆಸಿಕೊಂಡರೆ ಹೊಟ್ಟೆ ಉರಿಯುತ್ತದೆ. ದುಡಿಯುವ ಕೈಗಳನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ಚಿತ್ರರಂಗದ ಗಣ್ಯರೊಂದಿಗೆ ಮಾತನಾಡಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುತ್ತೇವೆ ಎಂದು ಹೇಳಿದರು.

Comments are closed.