ಮನೋರಂಜನೆ

ಪವನ್ ಕಲ್ಯಾಣ್ ಅವರ ಕೊನೆಯ ಚಿತ್ರಕ್ಕೆ ಚಾಲನೆ

Pinterest LinkedIn Tumblr

pawan-filmತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಮತ್ತು ತ್ರಿವಿಕ್ರಮ ಶ್ರೀನಿವಾಸ್ ಜೊತೆಯಲ್ಲಿ ತಯಾರಾಗುವ ಸಿನಿಮಾ ನಿನ್ನೆ ಖಾಸಗಿ ಸ್ಟುಡಿಯೋವೊಂದರಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿತು. ಕಡಿಮೆ ಅವಧಿಯಲ್ಲಿ ಬಿಡುಗಡೆಗೊಂಡ ಪವನ್ ಕಲ್ಯಾಣ್ ರವರ ಮೂರನೇ ಚಿತ್ರವಾಗಿದೆ.
ಚಿತ್ರವನ್ನು ಸೂರ್ಯದೇವರ ರಾಧಾಕೃಷ್ಣ ತಯಾರಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿರುತ್ತಾರೆ, ಸದ್ಯದಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎನ್ನುತ್ತಾರೆ ನಿರ್ಮಾಪಕರು. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.ಚಿತ್ರದ ಶೂಟಿಂಗ್ ಡಿಸೆಂಬರ್ ನಿಂದ ಆರಂಭವಾಗಲಿದೆ.
ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಡಲಿದ್ದಾರೆ. ಪವನ್ ಕಲ್ಯಾಣ್ ಸಂಪೂರ್ಣವಾಗಿ ಇನ್ನು ಮುಂದೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿರುವುದರಿಂದ ಈ ಚಿತ್ರ ಅವರ ಸಿನಿಮಾ ವೃತ್ತಿ ಜೀವನಲ್ಲಿ ಕಡೆಯ ಚಿತ್ರವಾಗಲಿದೆ.

Comments are closed.