ಮುಂಬಯಿ : ಬಾಲಿವುಡ್ ನಟಿ, ಐಟಂ ಡಾನ್ಸರ್ ಮಲೈಕಾ ಅರೋರಾ ಖಾನ್ ಮತ್ತು ಯುವ ನಟ ಅರ್ಜುನ್ ಕಪೂರ್ ನಡುವಿನ ಸ್ನೇಹ ಹೊಸದಲ್ಲ. ಆದರೆ ಆ ಸ್ನೇಹದ ವಿಚಾರದಲ್ಲಿ ಹಲವು ಗುಮಾನಿಗಳು ಬಾಲಿವುಡ್ ವಲಯದಲ್ಲಿ ಹರಿದಾಡಲು ಆರಂಭವಾಗಿದೆ.
ಈಗಾಗಲೇ ಪತಿಯಿಂದ ಬೇರೆಯಾಗಿ ಬಾಂದ್ರಾದ ಲ್ಲಿ ವಾಸಿಸುತ್ತಿರುವ ಮಲೈಕಾ ಅಪಾರ್ಟ್‌ಮೆಂಟ್‌ಗೆ ಅರ್ಜುನ್ ಕಪೂರ್ ತಡರಾತ್ರಿ ಭೇಟಿ ನೀಡಿ ವಾಪಾಸಾಗಿರುವುದು ಗುಮಾನಿಗಳಿಗೆ ರೆಕ್ಕೆ ಪುಕ್ಕ ನೀಡಿವೆ. ರಾತ್ರಿ 10.30 ರ ವೇಳೆಗೆ ಬಂದ ಅರ್ಜುನ್ ನಡು ಇರುಳು ಕಳೆದ ಬಳಿಕ ಕಾರಿನಲ್ಲಿ ವಾಪಾಸಾಗಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಇದೀಗ ವೈರಲ್ ಆಗಿ ಹರಿದಾಡುತ್ತಿವೆ.
ಸುದ್ದಿ ದೊಡ್ಡ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆ ಅರ್ಜುನ್ ಇನ್‌ಸ್ಟ್ರಾಗ್ರಾಮ್‌ನಲ್ಲಿ ‘ಹುಚ್ಚು ಆಲೋಚನೆಗಳಿಂದ ದೂರ.. ದೂರವಾಗುವ. ಪ್ರಕೃತಿ ಮಾತೆಯ ಮಡಿಲಲ್ಲಿ ಸಾಂತ್ವನವನ್ನು ಪಡೆಯುವ.. ಎಂದು ನಿಗೂಢ ಅರ್ಥದಲ್ಲಿ ಬರೆದಿದ್ದಾರೆ.
ಬೋನಿ ಕಪೂರ್- ಮೋನಾ ಶೌರಿ ಕಪೂರ್ ಪುತ್ರ 31 ಹರೆಯದ ಅರ್ಜುನ್ ಸದ್ಯ ಹಾಲ್ಫ್ ಗರ್ಲ್ ಫ್ರೆಂಡ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 43 ರ ಹರೆಯದ ಮಲೈಕಾ ಪತಿ ಅರ್ಬಾಜ್ ಖಾನ್‌ರಿಂದ ದೂರಾಗಿ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ.