ನವೆಂಬರ್ನಲ್ಲಿ ಬಾಲಿವುಡ್ನ ಬಹು ನಿರೀಕ್ಷಿತ ಸಿನಿಮಾಗಳು ತೆರೆ ಕಾಣಲು ಸಜ್ಜಾಗಿವೆ. ಪೈಪೋಟಿಯಲ್ಲಿ ಬಿಡುಗಡೆಯಾಗುತ್ತಿರುವ ಸ್ಟಾರ್ ಸಿನಿಮಾಗಳು ವೀಕ್ಷಕರ ನಿರೀಕ್ಷೆಯನ್ನು ಮುಟ್ಟುತ್ತವೆಯೇ ಎಂಬುದು ಸದ್ಯದ ಕುತೂಹಲ.
ಅಲಿಯಾ ಭಟ್ ಮತ್ತು ಶಾರುಖ್ ಖಾನ್ ಅಭಿನಯದ ‘ಡಿಯರ್ ಜಿಂದಗಿ’, ಫರ್ಹಾನ್ ಅಕ್ತರ್ ನಟನೆಯ ‘ರಾಕ್ ಆನ್ 2’ ಹಾಗೂ ಜಾನ್ ಅಬ್ರಾಹಂ ಅಭಿನಯದ ‘ಫೋರ್ಸ್ 2’ ಸಿನಿಮಾ ಸೇರಿದಂತೆ ಸಾಲು ಸಾಲು ಚಿತ್ರಗಳು ಬಿಡುಗಡೆ ಸಿದ್ಧಗೊಂಡಿದೆ.
ರಣಬೀರ್ ಕಪೂರ್ ನಾಯಕನಾಗಿರುವ ‘ಏ ದಿಲ್ ಹೈ ಮುಷ್ಕಿಲ್’, ಅಜಯ್ ದೇವಗನ್ ಅಭಿನಯದ ‘ಶಿವಾಯ್’ ಸಿನಿಮಾಗಳು ಅಕ್ಟೋಬರ್ನ ಒಂದೇ ವಾರದಲ್ಲಿ ತೆರೆಕಂಡಿದ್ದವು. ಸ್ಟಾರ್ ಸಿನಿಮಾಗಳ ಬಿಡುಗಡೆ ಗುದ್ದಾಟ ನವೆಂಬರ್ನಲ್ಲಿಯೂ ಮುಂದುವರಿಯಲಿದೆ.
ಶಾರುಖ್ ಖಾನ್ ಮತ್ತು ಅಲಿಯಾ ಭಟ್ ನಡುವಿನ ಮಾತುಕತೆ ಇರುವ ದೃಶ್ಯಗಳ ತುಣಕನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಮೊದಲ ಟೀಸರ್ನಲ್ಲಿ ಅಲಿಯಾ ಕೇಳುವ ಎಲ್ಲ ಪ್ರಶ್ನೆಗಳಿಗೆ ಶಾರುಖ್ ಉತ್ತರಿಸುತ್ತಾರೆ. ಎರಡನೇ ಟೀಸರ್ನಲ್ಲಿ ಅಲಿಯಾ ತಮಾಷೆ ಮಾಡುವ ವಿಫಲ ಯತ್ನಗಳ ಅನಾವರಣ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಡಿಯರ್ ಜಿಂದಗಿ ಸಿನಿಮಾ ನವೆಂಬರ್ 25ರಂದು ತೆರೆ ಕಾಣಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.
ಇನ್ನೂ ಶಂಕರ್–ಎಹ್ಸಾನ್–ಲಾಯ್ ಸಂಗೀತ ನಿರ್ದೇಶನವಿರುವ ರಾಕ್ ಆನ್ 2 ಸಿನಿಮಾ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ.
ತೆರೆ ಕಾಣುತ್ತಿರುವ ಸಿನಿಮಾಗಳು:
* ನವೆಂಬರ್ 11
ರಾಕ್ ಆನ್ 2, ಚಾರ್ ಸಾಹಿಬ್ಜಾದೆ: ರೈಸ್ ಆಫ್ ಬಂದಾ ಸಿಂಗ್ ಬಹದೂರ್ , ಸಾನ್ಸೇ
* ನವೆಂಬರ್ 18
ತುಮ್ ಬಿನ್ 2, ಫೋರ್ಸ್ 2
* ನವೆಂಬರ್ 25
ಡಿಯರ್ ಜಿಂದಗಿ, ಮೋಹ್ ಮಾಯಾ ಮನಿ