ಮನೋರಂಜನೆ

ಬೇರೆ ಮನೆಯಲ್ಲಿ ವಾಸವಿರುವ ಪತಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ ರಂಭಾ !

Pinterest LinkedIn Tumblr

ramba3

ಪಂಚಭಾಷಾ ನಟಿ ರಂಭಾ 2010ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರೊಂದಿಗೆ ವಿವಾಹವಾಗಿದ್ದು ಇದೀಗ ತಮ್ಮ ದಾಂಪತ್ಯವನ್ನು ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.

ಟೊರಾಂಟೋದಲ್ಲಿ ವಾಸವಾಗಿರುವ ಈ ಜೋಡಿಗೆ 5 ವರ್ಷ ಹಾಗೂ ಒಂದೂವರೆ ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ ಇದೀಗ ರಂಭಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪತಿ ಇಂದ್ರನ್ ಕೆಲ ತಿಂಗಳಿನಿಂದ ಬೇರೆ ಮನೆಯಲ್ಲಿ ವಾಸವಾಗಿದ್ದು ಈ ಹಿನ್ನೆಲೆಯಲ್ಲಿ ರಂಭಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 9ರ ಅನುಸಾರ ಪತಿಯೊಂದಿಗೆ ವಾಸಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಈ ಅರ್ಜಿಯ ವಿಚಾರಣೆ ಡಿಸೆಂಬರ್ 3ರಂದು ನಡೆಯಲಿದೆ.

Comments are closed.