ಮಂಗಳೂರು: ಹೆಣ್ಮಕ್ಕಳೇ ಹೀಗೆ ಕಣ್ರೀ. ಹೀಗೆ ಹೇಳೋದನ್ನ ಅದೆಷ್ಟೋ ಬಾರಿ ಕೇಳಿರುತ್ತೇವೆ. ಹೆಣ್ಣುಮಕ್ಕಳು ಹೆಚ್ಚು ಭಾವನಾ ಜೀವಿಗಳು. ಅವ್ರು ವಾಸ್ತವಕ್ಕಿಂತ ಹೆಚ್ಚಾಗಿ ಕಲ್ಪನೆಗಳ ಲೋಕದಲ್ಲಿ ಭಾವನೆಗಳ ಲೋಕದಲ್ಲಿ ಇರುತ್ತಾರೆ. ಮತ್ತು ಹೀಗೆ ಇರೋದಕ್ಕೂ ಬಯಸುತ್ತಾರೆ. ಇನ್ನು ಹೆಣ್ಣುಮಕ್ಕಳು ಬೇಗನೇ ಭಾವುಕರೂ ಆಗುತ್ತಾರೆ. ಅಂದ್ರೆ ಯಾರಾದ್ರೂ ಏನಾದ್ರೂ ಅಂದ್ರೆ ಸಾಕು ಅದನ್ನೇ ತಲೆಗೆ ಹಚ್ಚಿಕೊಂಡು ಕೂರುತ್ತಾರೆ. ಹಾಗಂತ ಎಲ್ಲ ಮಹಿಳೆಯರೂ ಹೀಗೆ ಇರ್ತಾರೆ ಎಂದು ಹೇಳೋಕೆ ಕಷ್ಟ.
ತಮ್ಮ ಕಷ್ಟ ನೋವುಗಳನ್ನು ಮತ್ತೊಬ್ಬರ ಹತ್ತಿರ ಹಂಚಿಕೊಂಡು ಬೇಗನೇ ಮನಸ್ಸನ್ನು ಹಗುರ ಮಾಡಿಕೊಳ್ಳುವ ಸ್ವಭಾವ ಇವರದ್ದಾಗಿರೋದಿಲ್ಲ. ಹೆಂಗಸರನ್ನು ಅರ್ಥ ಮಾಡಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ ಬಿಡಿ. ಹೆಣ್ಣಿನ ಮನಸ್ಸಿನ ಜಾಡೂ ಒಂದೇ ಮೀನಿನ ಹೆಜ್ಜೆಯ ಜಾಡೂ ಒಂದೇ ಎಂದು ಹೇಳೋದು ಇದಕ್ಕೆ.
ಮಹಿಳೆ ಹೀಗೆ ಭಾವನಾ ಜೀವಿಯಾಗಿರೋದಕ್ಕೆ ಕಾರಣವಾದ್ರೂ ಏನು..?
• ಕುಟುಂಬದ ಹಿನ್ನೆಲೆ: ಹೆಣ್ಣುಮಕ್ಕಳು ತಾವು ಬೆಳೆದು ಬಂದ ಕುಟುಂಬದ ಹಿನ್ನೆಲೆಯೇ ಹಾಗಿರುತ್ತದೆ. ಹೆಣ್ಣು ತಗ್ಗಿ ಬಗ್ಗಿ ನಡೆಯಬೇಕು. ಯಾವುದನ್ನೂ ತಿರಸ್ಕರಿಸಬಾರದು, ಪಾಲಿಗೆ ಬಂದದನ್ನು ಅನುಭವಿಸಲೇಬೇಕು. ಅಥವಾ ಎಲ್ಲವನ್ನೂ ತ್ಯಾಗ ಮಾಡಬೇಕು. ಕುಟುಂಬದಲ್ಲಿ ತಮ್ಮ ಬಗ್ಗೆ ಯೋಚನೆ ಮಾಡೋದಕ್ಕಿಂತ ಹೆಚ್ಚಾಗಿ ಬೇರೊಬ್ಬ ಬಗ್ಗೆ ಯೋಚನೆ ಮಾಡೋದು ಹೀಗೆ ಬೇರೆಯವರಿಗೋಸ್ಕರ ಜೀವನ ಸಾಗಿಸಬೇಕು ಅನ್ನೋ ಕುಟುಂಬ ಹೇಳಿಕೊಟ್ಟ ಪಾಠ ಮಹಿಳೆಯರನ್ನು ಹೆಚ್ಚು ಭಾವನಾ ಜೀವಿಯಾಗಿರಿಸುತ್ತದೆ.
• ದಿನನಿತ್ಯದ ಒತ್ತಡಗಳು: ಮಹಿಳೆ ಅಂದ್ರೆ ಅದು ಬರೀ ಸ್ತ್ರೀ ಅಷ್ಟೇ ಅಲ್ಲ. ಆಕೆ ತಾಯಿ, ಹೆಂಡತಿ, ಅಕ್ಕ, ಅತ್ತಿಗೆ, ಮಗಳು ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸಬೇಕಾಗುತ್ತದೆ. ಆಕೆಗಿರೋ ಸಾಮಾಜಿಕ ಜವಬ್ದಾರಿ ಮತ್ತು ಜೀವನದ ಒತ್ತಡಗಳು ಅಷ್ಟಿಷ್ಟಲ್ಲ. ಹೀಗೆ ತನ್ನ ಕುಟುಂಬದ ಜೊತೆಗೆ ತನ್ನ ದಿನನಿತ್ಯದ ಒತ್ತಡಗಳು ಆಕೆಯನ್ನು ಮತ್ತಷ್ಟು ಭಾವನೆಗೆ ಒಳಗಾಗುವ ಹಾಗೆ ಮಾಡುತ್ತದೆ.
• ಹಾಮೋರ್ನ್: ಮಹಿಳೆಯರಿಗೆ ಹಾಮೋರ್ನ್ ಹೆಚ್ಚು ಕಮ್ಮಿ ಆಗೋದು ಸಾಮಾನ್ಯ ಅನಾರೋಗ್ಯ ಲಕ್ಷಣಗಳಲ್ಲಿ ಒಂದು. ಹಾಮೋರ್ನ್ ಹೆಚ್ಚು ಕಮ್ಮಿ ಆಗೋದು ಸಾಮಾನ್ಯವಾದ ರೋಗ ಆದ್ರೂ ಅದು ಆಕೆಯ ಮೇಲೆ ಬೀರುವ ಪರಿಣಾಮ ತುಂಬಾನೇ ಇದೆ. ಹೀಗೆ ಹಾಮೋರ್ನ್ ಹೆಚ್ಚು ಕಮ್ಮಿ ಆಗೋದ್ರಿಂದ ತಿಂಗಳಿನ ಮುಟ್ಟು ಏರುಪೇರಾಗುತ್ತದೆ. ಈ ಸಮಯದಲ್ಲಿ ಮಹಿಳೆ ಖಿನ್ನತೆಗೆ ಒಳಗಾಗುತ್ತಾಳೆ. ಖಿನ್ನತೆ ಮಹಿಳೆಯನ್ನು ಮಾನಸೀಕವಾಗಿ ಕುಗ್ಗುವಂತೆ ಮಾಡುತ್ತದೆ.
• ಹಿಂದೆ ಆದ ಕೆಟ್ಟ ಘಟನೆಗಳು: ಹೀಗೆ ಬಾಲ್ಯದಲ್ಲಿಯೇ ಆಗಲಿ ಅಥವಾ ಹಿಂದೆ ಆದ ಕೆಲ ಅಹಿತಕರ ಘಟನೆಗಳಿಂದ ಹೆಣ್ಣುಮಕ್ಕಳು ಜರ್ಜರಿತರಾಗಿಬಿಟ್ಟಿರುತ್ತಾರೆ. ಬಾಲ್ಯದಲ್ಲಾದ ನೋವನ್ನು ಯಾರ ಹತ್ತಿರವೂ ಹೇಳಿಕೊಳ್ಳಲಿಕ್ಕೆ ಆಗದೇ ತಾವೇ ಮನದಲ್ಲಿ ಕೊರಗುತ್ತಾ ಇರುತ್ತಾರೆ. ಹಿಂದೆ ಆದ ಆಘಾತ ಅವರನ್ನು ಆಗಾಗ ಕಾಡುತ್ತಾ ಇರುತ್ತದೆ. ಇದರಿಂದಾಗಿಯೂ ಮಹಿಳೆ ಜೀವನ ಪರ್ಯಂತ ಆಗಾಗ ಆ ಘಟನೆಯಿಂದ ನೋವು ಅನುಭವಿಸುತ್ತಾನೇ ಇರುತ್ತಾಳೆ.
• ಸಹಾಯಹಸ್ತ: ಪುರುಷರಿಗೆ ಹೋಲಿಸಿದ್ರೆ ಮಹಿಳೆಗೆ ಸಹಾಯ ಮಾಡೋ ಮನಸ್ಸು ಜಾಸ್ತಿ ಇರುತ್ತದೆ. ಮಹಿಳೆಗೆ ಕ್ಷಮಾ ಗುಣ ಅಥವಾ ಸಹಾಯ ಗುಣ ತುಸು ಜಾಸ್ತಿಯೇ. ಹೀಗೆ ಕೆಲವೊಂದು ಬಾರಿ ತನ್ನತನವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ತಾನು ಕಳೆದುಕೊಂಡಿರುವದರ ಬಗ್ಗೆ ತನ್ನಲ್ಲಿಯೇ ಕೊರಗೋದು ಜಾಸ್ತಿನೇ..
• ಸಮಾಜದ ಕಟ್ಟಳೆ: ಭಾರತೀಯ ಸಮಾಜದಲ್ಲಿ ಮಹಿಳೆಗೆ ಕಟ್ಟಳೆಗಳು ತುಸು ಜಾಸ್ತಿನೇ. ಆ ಕಟ್ಟಳೆಗಳು ಆಕೆಯನ್ನು ಸಾಧನೆಯ ಹಾದಿಯಲ್ಲಿ ಸಾಗುವಾಗ ಅಡ್ಡಿ ಬರುತ್ತಿರುತ್ತವೆ. ಆಕೆಗೆ ಗುರಿ ಮುಟ್ಟೋ ಸಾಮಥ್ರ್ಯವಿದ್ದರೂ ಸಾಮಾಜಿಕ ಅಡೆತಡೆಗಳು ಆಕೆಯನ್ನು ಬಂಧಿಸುತ್ತವೆ. ಆಕೆಯ ಅಸಹಾಯಕತೆ ಆಕೆಯನ್ನು ಕೊರಗುವ ಹಾಗೆ ಮಾಡುತ್ತವೆ. ಆದ್ರೆ ಇತ್ತೀಚಿನ ದಿನಮಾನಗಳಲ್ಲಿ ಮಹಿಳೆ ಈ ಸಾಮಾಜಿ ಕಟ್ಟಳೆಗಳನ್ನು ಮೆಟ್ಟಿ ನಿಂತು ಸಾಧನೆ ಹಾದಿಯತ್ತ ಸಾಗುತ್ತಿದ್ದಾಳೆ ಅನ್ನೋದು ಹೆಮ್ಮೆಯ ಸಂಗತಿ.
Comments are closed.