ಮನೋರಂಜನೆ

ವಿದ್ಯಾ ಬಾಲನ್‌ ನಟನೆಯ ಕಹಾನಿ 2 ಸಿನಿಮಾ ಟ್ರೇಲರ್‌ ಬಿಡುಗಡೆ

Pinterest LinkedIn Tumblr

kahaniರೋಚಕ ಚಿತ್ರಕಥೆ ಹೊಂದಿದ್ದ 2012ರ ಬಾಲಿವುಡ್‌ ಸಿನಿಮಾ ‘ಕಹಾನಿ’ ಪ್ರಶಂಸೆಗೆ ಪಾತ್ರವಾಗಿತ್ತು. ಕಾಣೆಯಾದ ಗಂಡನಿಗಾಗಿ ಕೋಲ್ಕತ್ತದ ಗಲ್ಲಿಗಲ್ಲಿಗಳಲ್ಲಿ ಹುಡುಕುವ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿದ್ಯಾ ಬಾಲನ್‌, ತನ್ನ ಮುಂದಿನ ಕಥೆ ಹೇಳಿಕೊಳ್ಳಲು ‘ಕಹಾನಿ 2’ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಕಹಾನಿ 2 ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಮಗಳ ರಕ್ಷಣೆಗಾಗಿ ಕಂಕಣಬದ್ಧಳಾಗಿರುವ ತಾಯಿಯಾಗಿ ವಿದ್ಯಾ ಇಲ್ಲಿ ಕಾಣುತ್ತಾರೆ. ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿರುವವಳ ಹಿನ್ನೆಲೆ ಪತ್ತೆಗೆ ಹೊರಡುವ ಪೊಲೀಸ್‌ ಅಧಿಕಾರಿ, ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ಅವಳನ್ನೇ ಹುಡುಕುತ್ತಿರುವ ಮತ್ತೊಬ್ಬ ಪೊಲೀಸ್‌, ದುರ್ಗಾರಾಣಿ ಸಿಂಗ್‌ ಕಥೆಯನ್ನು ಬರೆದುಕೊಂಡಿರುವ ದಿನಚರಿ ಪುಸ್ತಕ, ಮಗಳ ಮಾತು,… ಹೀಗೆ ಹಲವು ತಿರುವುಗಳನ್ನು ಹೊಂದಿರುವ ಮತ್ತೊಂದು ರೋಚಕ ಕಥೆಯನ್ನು ಒಳಗೊಂಡಿರುವಂತೆ ಟ್ರೇಲರ್‌ ಭಾಸವಾಗುತ್ತಿದೆ. ಡಿಸೆಂಬರ್‌ 2ರಂದು ಸಿನಿಮಾ ತೆರೆ ಕಾಣಲಿದೆ.

ಚಿತ್ರ: ಕಹಾನಿ 2
ನಿರ್ದೇಶನ: ಸುಜೋಯ್‌ ಘೋಷ್‌
ತಾರಾಗಣ: ವಿದ್ಯಾ ಬಾಲನ್‌, ಅರ್ಜುನ್‌ ರಾಮ್‌ಪಾಲ್‌

Comments are closed.