ಮನೋರಂಜನೆ

ಮಂಡ್ಯದ ನೂತನ ಮನೆಗೆ ಆಗಮಿಸಿದ ನಟಿ ರಮ್ಯಾ

Pinterest LinkedIn Tumblr

ramyaಮಂಡ್ಯ (ಅ.18): ಮಾಜಿ ಸಂಸದೆ ರಮ್ಯಾ ನಿನ್ನೆ ಮಂಡ್ಯದಲ್ಲಿರುವ ನೂತನ ಮನೆಗೆ ಆಗಮಿಸಿದರು.
ವಿಶೇಷ ಅಂದ್ರೆ ರಮ್ಯಾ ತಮ್ಮ ಕಾರ್ ಚಲಾಯಿಸಲು ಬೇರೆ ಡ್ರೈವರ್ಗಳನ್ನು ಬಳಸಿಕೊಂಡಿಲ್ಲ. ತಾವೇ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಬಂದರು. ಮಂಡ್ಯದಲ್ಲಿರುವ ತಮ್ಮ ನೂತನ ಮನೆಯನ್ನು ವೀಕ್ಷಿಸಿದರು. ಇನ್ನು ಕೆಲವೇ ದಿನಗಳಲ್ಲಿ ಮಂಡ್ಯದಲ್ಲಿ ತಮ್ಮ ನೂತನ ಮನೆ ಗೃಹಪ್ರವೇಶ ಮಾಡಲಿರುವ ರಮ್ಯಾ ಇಲ್ಲೇ ವಾಸ ಮಾಡಲಿದ್ದಾರೆ.
ಈ ಹಿಂದೆ ಗೌರಿ ಗಣೇಶ ಹಬ್ಬದಂದು ನೂತನ ಮನೆ ಗೃಹ ಪ್ರವೇಶ ನಡೆಸುವುದಾಗಿ ರಮ್ಯಾ ಹೇಳಿದ್ದರು. ಆದರೆ ಇದುವರೆಗೂ ಗೃಹ ಪ್ರವೇಶ ನೆರವೇರಿಲ್ಲ.
ಇದೀಗ ಇದ್ದಕ್ಕಿದ್ದಂತೆ ಮನೆಗೆ ಭೇಟಿ ನೀಡಿದ್ದಾರೆ. ಇನ್ನೂ ರಮ್ಯಾ ಬಂದ ವಿಷಯ ಗೊತ್ತಾಗುತ್ತಲೇ ಮನೆ ಮುಂದೆ ಜನ ಸೇರುತ್ತಿದ್ದಂತೆ ಮತ್ತೆ ಕಾರ್ ಡ್ರೈವ್ ಮಾಡಿಕೊಂಡು ರಮ್ಯಾ ಹೊರಟುಹೋದರು.

Comments are closed.