ಮನೋರಂಜನೆ

ನವಾಜುದ್ದೀನ್ ಬೆಂಬಲಕ್ಕೆ ನಿಂತ ನಟಿ

Pinterest LinkedIn Tumblr

swara-bhaskarಮುಂಬೈ: ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಜನರ ‘ಕೆಟ್ಟ ಮನಸ್ಥಿತಿ’ ಸಮಾಜದಿಂದ ತೊಲಗಬೇಕಿದೆ ಎಂದು ದಸರಾ ಹಬ್ಬದ ಪ್ರಯುಕ್ತವಾಗಿ ನಟಿ ಸ್ವರ ಭಾಸ್ಕರ್ ಹೇಳಿದ್ದಾರೆ.
ನಟ ನವಾಜುದ್ದೀನ್ ಸಿದ್ದಿಕಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು, ಅವರ ಹುಟ್ಟೂರಾದ ಉತ್ತರಪ್ರದೇಶದ ಬುಧಾನದಲ್ಲಿ ಹಿಂದೂ ಸಮುದಾಯದ ನಾಟಕ ರಾಮ ಲೀಲಾದಿಂದ ಹಿಂದೆ ಸರಿಯಬೇಕು ಎಂದು ಶಿವಸೇನಾ ಕಾರ್ಯಕರ್ತರು ಬೆದರಿಕೆ ಹಾಕಿದ್ದರು. ಹಿಂದೂ ಸಮುದಾಯದ ಈ ನಾಟಕದಲ್ಲಿ ಮುಸ್ಲಿಮರು ಭಾಗವಹಿಸುವಂತಿಲ್ಲ ಎಂಬುದು ಈ ಪಕ್ಷದ ಕಾರ್ಕರತರ ದೂರು.
ದಸರಾ ಹಬ್ಬದ ಸಮಯದಲ್ಲಿ ಮಂಗಳವಾರ ಟ್ವೀಟ್ ಮಾಡಿರುವ ಸ್ವರ “ರಾಮ್ ಲೀಲಾ ದಲ್ಲಿ ಭಾಗವಹಿಸದಂತೆ ನವಾಜುದ್ದೀನ್ ಸಿದ್ಧಿಕಿಯನ್ನು ತಡೆದ ಕೆಟ್ಟ ಮನಸ್ಥಿತಿ’ಯಿಂದ ಮೇಲಕ್ಕೆ ನಾವೆಲ್ಲಾ ಏರಬೇಕಿದೆ” ಎಂದಿರುವ ಅವರು “ನಮ್ಮೊಳಗಿನ ರಾಕ್ಷನಿಗಿಂತಲೂ ಮೇಲಕ್ಕೆ ಈ ದಸರಾ ಹಬ್ಬದಲ್ಲಿ ಏರಬೇಕಿದೆ- ಆ ರಾಕ್ಷಸ ಯಾರೆಂದರೆ ದ್ವೇಷ, ಮೂರ್ಖತನ, ಕುರುಡು ಮೂಢ ನಂಬಿಕೆ, ಧರ್ಮಾಂಧತೆ. ಈ ಸರ್ವಾಧಿಕಾರಿ ಧೋರಣೆಯನ್ನು ಸುಡಬೇಕಿದೆ” ಎಂದು ಕೂಡ ಹೇಳಿದ್ದಾರೆ.

Comments are closed.