
ನವದೆಹಲಿ: ಭಾರತ ಮತ್ತು ಪಾಕ್‌ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ವಿಚಾರವಾಗಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಾಕಿಸ್ತಾನಿ ನಟಿ ಮಹಿರಾ ಖಾನ್‌ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ಉಗ್ರ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ, ಜೀವ ಹಾನಿಯನ್ನು ಸಹಿಸಲಾಗದು. ಅದು ಯಾವ ದೇಶವೇ ಆಗರಲಿ,ಎಂದು ಮಹಿರಾ ಹೇಳಿದ್ದಾರೆ.
ಮುಂಬರುವ ಬಾಲಿವುಡ್‌ಚಿತ್ರ ರಯೀಸ್‌ನಲ್ಲಿ ಶಾರೂಖ್‌ಖಾನ್‌ಜತೆ ಮಹಿರಾ ಖಾನ್‌ನಟಿಸಿದ್ದಾರೆ. ಸೆಪ್ಟೆಂಬರ್18ರಂದು ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರ ದಾಳಿ ನಡೆದ ನಂತರ ಮಹಿರಾ ಇದೇ ಮೊದಲ ಬಾರಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಮತ್ತೊಬ್ಬ ಪಾಕ್‌ನಟ ಫವದ್‌ಖಾನ್‌ಕೆಲ ದಿನಗಳ ಹಿಂದೆ, ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡುವೆ ಎಂದಿದ್ದರು. ಇಬ್ಬರೂ ಪೇಸ್‌ಬುಕ್‌ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾನು ಕಳೆದ 5 ವರ್ಷಗಳಿಂದ ಇಲ್ಲಿ ಅಭಿನಯಿಸುತ್ತಿದ್ದೇನೆ, ದೇಶದ ಗೌರವಕ್ಕೆ ಧಕ್ಕೆಯಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ನಾನೊಬ್ಬಳು ಪಾಕಿಸ್ತಾನದ ನಾಗರಿಕಳಾಗಿದ್ದೇನೆ,ನಾನು ಉಗ್ರ ವಾದವನ್ನು ಸಹಿಸೊಲ್ಲ, ಮಾನವರ ಜೀವ ಹಾನಿಯನ್ನ ಸಹಿಸಲಾಗದು ಎಂದು ಖಂಡಿಸಿದ್ದಾರೆ. ಪ್ರಪಂಚ ಶಾಂತಿ ನೆಮ್ಮದಿಯಿಂದ ಇರಬೇಕೆಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.
Comments are closed.