
ಚೆನ್ನೈ: ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏರ್ಪಟ್ಟಿರುವ ಹೋರಾಟದ ಬಗ್ಗೆ ಹಿರಿಯ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ನಮಗೆ ಭಾಷೆ ತಿಳಿಯದೇ, ನಾವು ಮಂಗಗಳಾಗಿದ್ದಾಗಿನಿಂದಲೂ ಕಾವೇರಿ ಹರಿಯುತ್ತಿದೆ, ನಮ್ಮ ನಂತರವೂ ಕಾವೇರಿ ಹರಿಯುತ್ತಲೇ ಇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಇತಿಹಾಸವನ್ನು ಮುಂದಿನ ದಿನಗಳಲ್ಲಿ ಕನ್ನಡಿಯಲ್ಲಿ ನೋಡಿಕೊಂಡರೇ ನಮಗೆ ನಾಚಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿಗೆ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ನಂತರ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉಂಟಾದ ಗಲಭೆ, ಹಿಂಸಾಚಾರವನ್ನು ಅವರು ಖಂಡಿಸಿದ್ದಾರೆ.
Comments are closed.