
ಮುಂಬಯಿ; ನಾನು ಒಬ್ಬ ಹೆಣ್ಣು ಮಗಳು, ಹೀಗಾಗಿ ನನಗೆ ಹೆಣ್ಣುಮಗು ಜನಿಸಲೆಂದೇ ಇಷ್ಟ ಪಡುತ್ತೇನೆ ಎಂದು ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಹೇಳಿದ್ದಾರೆ.
ಮುಂಬಯಿಯಲ್ಲಿ ಆಯೋಜಿಸಿದ್ದ ‘ಭಾರತದಲ್ಲಿ ಜಾಗತಿಕ ನಾಗರಿಕ ಚಳವಳಿ’ಗೆ ಬೆಂಬಲ ನೀಡಿ ಮಾತನಾಡಿದ ಕರೀನಾ, ನಾನು ಎಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಹೋದರು ಇದೊಂದು ಪ್ರಶ್ನೆ ಕಾಯಂ ಆಗಿಯೇ ಕೇಳುತ್ತಾರೆ. ಯಾವ ಮಗು ಆಗಲೆಂದು ಬಯಸುತ್ತೀರಿ ಎಂದು ಕೇಳುತ್ತಾರೆ, ಹೆಣ್ಣಾಗಲಿ ಅಥವಾ ಗಂಡು ಮಗು ಆಗಲಿ, ನನಗೆ ಅಂಥ ವ್ಯತ್ಯಾಸವೇನು ಕಾಣುವುದಿಲ್ಲ ಎಂದು ಹೇಳಿದ ಅವರು, ನಾನೊಬ್ಬಳು ಹೆಣ್ಣು, ಹಾಗಾಗಿ ಹೆಣ್ಣುಮಗುವನ್ನೇ ಇಷ್ಟ ಪಡುತ್ತೇನೆ.
ನನ್ನ ತಂದೆ ತಾಯಿಗೆ ನಾನು ಹೆಣ್ಣು ಮಗಳಾಗಿದ್ದೇನೆ, ಗಂಡು ಮಗ ಮಾಡಿದ್ದಕ್ಕಿಂತಲೂ ಹೆಚ್ಚಾಗಿ ಅವರನ್ನು ನೋಡಿಕೊಂಡಿದ್ದೇನೆ ಎಂದು ಕರೀನಾ ಹೇಳಿದ್ದಾರೆ.
ನೀನು ಮದುವೆ ಆಗಿದ್ದೀಯಾ, ಆದರೂ ಕೆಲಸಕ್ಕೆ ಹೋಗುತ್ತೀಯಾ, ನಿನಗೆ ಮಗುವಾಗಿದೆ ಆದರೂ ನೀನೂ ಕೆಲಸಕ್ಕೆ ಹೋಗುತ್ತಿದ್ದೀಯಾ ಎನ್ನುವಂತ ಪ್ರಶ್ನೆಗಳನ್ನು ಕೇಳುವ ದೇಶದಲ್ಲಿ ನಾವಿದ್ದೇವೆ. ಇಂಥ ಪ್ರಶ್ನೆಗಳಿಂದ ನನಗೆ ಬೇಸರವಾಗುತ್ತದೆ. ತಾಯ್ತನ ಎಂಬದು ಜೀವನದ ಒಂದು ಭಾಗ.
ಕೇವಲ ನನ್ನ ಮಗು ಮಾತ್ರವಲ್ಲ, ಲಕ್ಷಾಂತರ ಮಕ್ಕಳು ಹೊರಗಿದ್ದಾರೆ. ಹೆಣ್ಣು ಮಕ್ಕಳು ಹುಟ್ಟುವುದೇ ಶಾಪ ಎಂದು ಅವರು ಭಾವಿಸಿದ್ದಾರೆ. ಗಂಡಿಗೆ ಹೆಣ್ಣು ಸಮಾನವಲ್ಲ ಎಂಬುದು ಅವರ ಯೋಚನೆಯಾಗಿದೆ. ಆದರೆ ಎಲ್ಲರೂ ತಿಳಿಯಬೇಕಾದ ವಿಷಯ ಎಂದರೇ ಕೇವಲ ಮಹಿಳೆಗೆ ಮಾತ್ರ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಸಾಮರ್ಥ್ಯ ಇರುವುದು. ಇದೊಂದು ಸಂತೋಷದಾಯಕ ವಿಚಾರ ಎಂದು ಕರೀನಾ ಅಭಿಪ್ರಾಯ ಪಟ್ಟಿದ್ದಾರೆ.
Comments are closed.