ಚಿರಂಜೀವಿ ಸರ್ಜಾ ನಾಯಕರಾಗಿರುವ “ಸೀಜರ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ವಿನಯ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ತ್ರಿವಿಕ್ರಮ ಸಾಫಲ್ಯ ಹಾಗೂ ವಿನಯ್ ಈ ಚಿತ್ರದ ನಿರ್ಮಾಪಕರು.
ಬನ್ನೇರುಘಟ್ಟ ರಸ್ತೆ, ನಾಗರಬಾವಿ ರಸ್ತೆ, ಬಸವನಗುಡಿ, ಕುಮಾರಸ್ವಾಮಿ ಲೇಔಟ್ ಸುತ್ತ ಮುತ್ತ ಚಿತ್ರೀಕರಣಗೊಳ್ಳುವುದರೊಂದಿಗೆ ಶೇ. 70ರಷ್ಟು ಮುಕ್ತಾಯಗೊಂಡಿದೆ. ವಿ. ರವಿಚಂದ್ರನ್, ಪ್ರಕಾಶ್ ರೈ ಮತ್ತು ಚಿರಂಜೀವಿ ಸರ್ಜಾ ಈ ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿದ್ದು, ಪಾರುಲ್ ಯಾದವ್ ಈ ಚಿತ್ರದ ನಾಯಕಿ. ಈ ಚಿತ್ರದಲ್ಲಿ ರವಿಚಂದ್ರನ್ ಸಾವಿರಾರು ಕಾರುಗಳಿಗೆ ಸಾಲ ನೀಡುವ ದೊಡ್ಡ ಫೈನಾನ್ಷಿಯರ್ ಪಾತ್ರ ಮಾಡಿದ್ದಾರೆ. ಕೊಟ್ಟ ಸಾಲ ಮರಳಿ ಬಾರದೇ ಇದ್ದಾಗ, ಅಂತಹ ವಾಹನಗಳನ್ನು ಸೀಜ್ ಮಾಡುವ ಪಾತ್ರ ಚಿರಂಜೀವಿ ಸರ್ಜಾ ಅವರದು.
ಈಗಾಗಲೇ ಪ್ರಕಾಶ್ ರೈ ಭಾಗವಹಿಸಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ, ರಮೇಶ್ ಭಟ್, ಶೋಭರಾಜ್, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ಕೀರ್ತಿರಾಜ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಚಂದನ್ ಶೆಟ್ಟಿ ಚಿತ್ರದ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಅಂಜಿ ಅವರ ಛಾಯಾಗ್ರಹಣ, ಗಣೇಶ್ ಅವರ ಸಾಹಸ ಈ ಚಿತ್ರಕ್ಕಿದೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.
-ಉದಯವಾಣಿ
Comments are closed.