ಮನೋರಂಜನೆ

ವಿಷ್ಣುವರ್ಧನ್, ರಜನಿಕಾಂತ್ ಗೆ ಹೋಲಿಕೆ: ರಾಮ್ ಗೋಪಾಲ್ ವರ್ಮಾ ಟ್ವೀಟ್ ಗೆ ಸುದೀಪ್ ಪ್ರತಿಕ್ರಿಯೆ

Pinterest LinkedIn Tumblr

sudeep-vermaಬೆಂಗಳೂರು: ಇತ್ತೀಚೆಗೆ ಬಿಡುಗಡೆಗೊಂಡ ಕೋಟಿಗೊಬ್ಬ-2 ಚಿತ್ರದ ಬಗ್ಗೆ ಹೊಗಳಿಕೆಯ ಮಾತನಾಡುತ್ತಾ ಕನ್ನಡದ ನಟ ಸುದೀಪ್ ನ್ನು ಹೊಗಳುವ ಭರದಲ್ಲಿ ಹಿರಿಯ ನಟರಾದ ದಿವಂಗತ ಡಾ.ವಿಷ್ಣುವರ್ಧನ್ ಮತ್ತು ತಮಿಳು ನಟ ರಜನಿಕಾಂತ್ ಅವರನ್ನು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವಮಾನ ಮಾಡಿದ್ದು ಹಳೆಯ ಸುದ್ದಿ. ಇದು ವಿಷ್ಣು ಅಭಿಮಾನಿಗಳನ್ನು ಕೆರಳಿಸಿದ್ದನ್ನೂ ನೀವು ಓದಿರಬಹುದು. ಹಾಗಾದರೆ ಇದಕ್ಕೆ ಸುದೀಪ್ ಏನು ಪ್ರತಿಕ್ರಿಯೆ ಕೊಟ್ಟಿರಬಹುದು ಎಂಬ ಕುತೂಹಲ ನಿಮ್ಮಲ್ಲಿರಬಹುದು.

ವಿಷ್ಣುವರ್ಧನ್ ಅವರನ್ನು ತಮ್ಮ ಗುರುವೆಂದು ಪರಿಗಣಿಸುವ ಸುದೀಪ್ ಒಬ್ಬ ನಟನಾಗಿ ವರ್ಮಾ ಟ್ವೀಟ್ ಗೆ ಅಷ್ಟೇ ಪಕ್ವವಾಗಿ ಉತ್ತರಿಸಿದ್ದಾರೆ. ತಾವು ಈ ಇಬ್ಬರು ಮಹಾನ್ ನಟರ ಹತ್ತಿರಕ್ಕೂ ಬರುವುದಿಲ್ಲ ಎಂದು ಹೇಳಿದ್ದಾರೆ.
@RGVzoomin thanks fr th appreciation sir….but I’m nowhere close nor a comparison to th two legends,,Vishnusir & RajiniSir..

— Kichcha Sudeepa (@KicchaSudeep) August 16, 2016

Comments are closed.