ಮನೋರಂಜನೆ

ಕ್ರೇಜಿ ಹುಡುಗನ ಮೊದಲ ರೋಮಾಂಚನ

Pinterest LinkedIn Tumblr

114“ಇದು ನನಗೆ ಸಿಕ್ಕ ಒಳ್ಳೆಯ ಲಾಂಚ್‌ …’- ಹೀಗೆ ಖುಷಿಯಿಂದ ಹೇಳಿದರು ದಿಲೀಪ್‌ ಪ್ರಕಾಶ್‌. ಯಾವ ದಿಲೀಪ್‌ ಪ್ರಕಾಶ್‌ ಎಂದರೆ “ಕ್ರೇಜಿಬಾಯ್‌’ ಚಿತ್ರ ತೋರಿಸಬೇಕು. ಚಿತ್ರ ಈ ವಾರ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ ಸದ್ದು ಮಾಡುತ್ತಿದೆ. ಇದು ದಿಲೀಪ್‌ಗ್ೂ ಖುಷುಕೊಟ್ಟಿದೆ. ಒಬ್ಬ ಹೊಸ ಹುಡುಗನಿಗೆ ಈ ರೀತಿಯ ಪ್ರೋತ್ಸಾಹ ಸಿಗುತ್ತಿರುವ ಖುಷಿ ದಿಲೀಪ್‌ಗಿದೆ. ಅದು ನಿಜ ಕೂಡಾ. ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾ ಬಿಡುಗಡೆಗೂ ಮುನ್ನ ಇಷ್ಟೊಂದು ನಿರೀಕ್ಷೆ ಹುಟ್ಟಿಸಿರಲಿಲ್ಲ. ಆದರೆ, “ಕ್ರೇಜಿಬಾಯ್‌’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಆ ನಿರೀಕ್ಷೆಯ ಮಟ್ಟವನ್ನು ಚಿತ್ರ ತಲುಪುತ್ತದೆ ಎಂಬ ವಿಶ್ವಾಸದೊಂದಿಗೆ ಶುಭ ಶುಕ್ರವಾರಕ್ಕಾಗಿ ಚಿತ್ರತಂಡ ಎದುರು ನೋಡುತ್ತಿದೆ. ಸಹಜವಾಗಿಯೇ ದಿಲೀಪ್‌ಗ್ೂ ಈ ಚಿತ್ರದ ಮೇಲೆ ನಂಬಿಕೆ ಇದೆ. “ನಾನಂತೂ ತುಂಬಾ ಖುಷಿಯಿಂದಿದ್ದೇನೆ. ಎಲ್ಲರಿಗೂ ಇಂತಹ ಅವಕಾಶ ಸಿಗೋದಿಲ್ಲ. ಆ ವಿಷಯದಲ್ಲಿ ನಾನು ಅದೃಷ್ಟವಂತ. ಏಕೆಂದರೆ “ಕ್ರೇಜಿಬಾಯ್‌’ ಚಿತ್ರದ ಮೂಲಕ ನಾನು ಅದ್ಧೂರಿಯಾಗಿಯೇ ಲಾಂಚ್‌ ಆಗುತ್ತಿದ್ದೇನೆ. ಮಹೇಶ್‌ ಬಾಬು ಅವರಂತಹ ಅನುಭವಿ ನಿರ್ದೇಶಕರ ಚಿತ್ರದಲ್ಲೇ ಅವಕಾಶ ಸಿಕ್ಕಿದೆ. ನಿರ್ಮಾಪಕ ಚಂದ್ರು ಕೂಡಾ ಸಿನಿಮಾ ಅದ್ಧೂರಿಯಾಗಿ ಮೂಡಿಬರಲು ಏನೆಲ್ಲಾ ಬೇಕೋ ಅವೆಲ್ಲವನ್ನು ನೀಡಿದ್ದಾರೆ. ಅದರ ಝಲಕ್‌ ಈಗಾಗಲೇ ಹಾಡು, ಟ್ರೇಲರ್‌ನಲ್ಲಿ ಕಾಣುತ್ತಿದೆ. ಚಿತ್ರ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ ದಿಲೀಪ್‌ ಪ್ರಕಾಶ್‌.

ಫ‌ಸ್ಟ್‌ ಸಿನ್ಮಾ ಬೆಸ್ಟ್‌ ಸಿನ್ಮಾ
ದಿಲೀಪ್‌ ಪ್ರಕಾಶ್‌ಗೆ ಹೀರೋ ಆಗಿ “ಕ್ರೇಜಿಬಾಯ್‌’ ಚೊಚ್ಚಲ ಸಿನಿಮಾ. ಅದಕ್ಕಿಂತ ಮುಂಚೆ ಮಾಲಾಶ್ರೀಯವರ “ಮಹಾಕಾಳಿ’ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರಕ್ಕೆ ಕಥೆ ಬರೆದಿದ್ದ ಅಜೇಯ್‌ ಕುಮಾರ್‌ ಅವರೇ “ಕ್ರೇಜಿಬಾಯ್‌’ಗೂ ಕಥೆ ಬರೆದಿದ್ದಾರೆ. ಹಾಗಾಗಿ, ಈ ಚಿತ್ರಕ್ಕೆ ದಿಲೀಪ್‌ ಹೊಂದಿಕೊಳ್ಳುತ್ತಾರೆಂಬ ಕಾರಣಕ್ಕೆ ಅವರನ್ನೇ ನಾಯಕರನ್ನಾಗಿ ಮಾಡಲಾಗಿದೆ. “ನಾನು ಸಿನಿಮಾಕ್ಕೆ ಬಂದಿದ್ದು ಆಕಸ್ಮಿಕವಾಗಿ. “ಮಹಾಕಾಳಿ’ ನಂತರ ನಾನು ಸಿನಿಮಾ ಮಾಡುತ್ತೇನೆಂದುಕೊಂಡಿರಲಿಲ್ಲ. ಆದರೆ, ಅಜೇಯ್‌ಕುಮಾರ್‌ ಅವರ “ಕ್ರೇಜಿಬಾಯ್‌’ಗೆ ನಾನು ಸೂಟ್‌ ಆಗುತ್ತೇನೆಂದು ನನ್ನನ್ನು ಹೀರೋ ಮಾಡಲು ನಿರ್ಧರಿಸಿದರು. ನಿರ್ಮಾಪಕ ಚಂದ್ರು ಕೂಡಾ ಸಿನಿಮಾ ಮಾಡಲು ಮುಂದಾದರು. ಈ ಸಿನಿಮಾವನ್ನು ಯಾರು ನಿರ್ದೇಶಿಸೋದು ಎಂದಾಗ ಕೇಳಿಬಂದ ಹೆಸರು ಮಹೇಶ್‌ ಬಾಬು ಅವರದು. ಆಗ ನಾನು ತುಂಬಾ ಖುಷಿಯಾದೆ. ಏಕೆಂದರೆ ಮಹೇಶ್‌ ಬಾಬು ಈಗಾಗಲೇ ಶಿವರಾಜಕುಮಾರ್‌, ಪುನೀತ್‌, ದರ್ಶನ್‌ ಸೇರಿದಂತೆ ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಖುಷಿಕೊಟ್ಟಿದೆ. ಒಬ್ಬ ಹೊಸ ಹುಡುಗ ಎನ್ನದೇ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ.ಯಾವ ಸನ್ನಿವೇಶದಲ್ಲಿ ಹೇಗೆ ನಟಿಸಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು’ ಎಂದು ತಮ್ಮ ಸಿನಿಮಾದ ಅನುಭವವನ್ನು ಹೇಳುತ್ತಾರೆ ದಿಲೀಪ್‌ ಪ್ರಕಾಶ್‌. ಅಂದಹಾಗೆ, ದಿಲೀಪ್‌ ಪ್ರಕಾಶ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿದ್ದಾರೆ. ಎಂಜಿನಿಯರ್‌ ಆಗುತ್ತೇನೆಂದುಕೊಂಡಿದ್ದ ದಿಲೀಪ್‌ಗೆ ಈಗ ಹೀರೋ ಆಗುವ ಅವಕಾಶ ಸಿಕ್ಕಿದೆ.

ಹೀರೋ ಆಗುವ ಅವಕಾಶ ಸಿಕ್ಕಿತ್ತೆಂಬ ಖುಷಿಯಲ್ಲಿ ಸುಖಾಸುಮ್ಮನೆ ಬಂದು ಕ್ಯಾಮರಾ ಮುಂದೆ ನಿಂತರೆ ಆಭಾಸ ಆಗುತ್ತದೆಂದು ದಿಲೀಪ್‌ಗೆ ಚೆನ್ನಾಗಿ ಗೊತ್ತಿತ್ತು. ಅದೇ ಕಾರಣಕ್ಕೆ ನಟನೆ, ಡ್ಯಾನ್ಸ್‌, ಫೈಟ್‌ ವಿಷಯಗಳಲ್ಲಿ ಟ್ರೈನಿಂಗ್‌ ಪಡೆದುಕೊಂಡೇ ಕ್ಯಾಮರಾ ಮುಂದೆ ಬಂದರಂತೆ. “ಮಹೇಶ್‌ ಬಾಬು ಹಾಗೂ ಅನಿಲ್‌ ಅವರು ಒಂದು ವಾರಗಳ ಕಾಲ ನಟನೆಯ ವರ್ಕ್‌ಶಾಪ್‌ ಮಾಡಿದರು. ಬಾಡಿ ಲಾಂಗ್ವೇಜ್‌ ಹೇಗಿರಬೇಕು, ಯಾವ ಸನ್ನಿವೇಶದಲ್ಲಿ ಹೇಗೆ ನಟಿಸಬೇಕು ಸೇರಿದಂತೆ ಅನೇಕ ವಿಷಯಗಳನ್ನು ಹೇಳಿಕೊಟ್ಟರು. ಹರ್ಷ ಹಾಗೂ ಚಿನ್ನಿ ಪ್ರಕಾಶ್‌ ಮಾಸ್ಟರ್‌ ಜೊತೆ ಡ್ಯಾನ್ಸ್‌ ಪ್ರಾಕ್ಟೀಸ್‌ ಮಾಡಿ ಆ ನಂತರವೇ ಶೂಟಿಂಗ್‌ಗೆ ಹೋಗುತಿದ್ದೆವು’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ದಿಲೀಪ್‌.

ಕಾಲೇಜ್‌ ಸ್ಟೋರಿ
ದಿಲೀಪ್‌ ಪ್ರಕಾಶ್‌ ಈಗಷ್ಟೇ ಕಾಲೇಜು ಮುಗಿಸಿರುವ ಹುಡುಗ. ಏಕಾಏಕಿ ಹೆವಿ ಸಬೆjಕ್ಟ್ ಇಟ್ಟುಕೊಂಡು ಸಿನಿಮಾ ಮಾಡಿದರೆ ಕಷ್ಟ ಎಂಬುದು ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತಿದ್ದ ಪರಿಣಾಮವಾಗಿ ಕಾಲೇಜು ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನೇ ಆಯ್ಕೆ ಮಾಡಲಾಗಿದೆ. ಇಡೀ ಸಿನಿಮಾ ಕಾಲೇಜ್‌ ಬ್ಯಾಕ್‌ಡ್ರಾಪ್‌ನಲ್ಲಿ ಸಾಗುತ್ತದೆಯಂತೆ. “ಇದೊಂದು ಸಿಂಪಲ್‌ ಕಥೆ. ಆದರೆ, ಅದನ್ನು ಹೇಳಿರುವ ರೀತಿ ತುಂಬಾ ಭಿನ್ನವಾಗಿದೆ. ಇಡೀ ಸಿನಿಮಾವನ್ನು ತುಂಬಾ ಕಲರ್‌ಫ‌ುಲ್‌ ಆಗಿ ಹಾಗೂ ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ ನಮ್ಮ ನಿರ್ಮಾಪಕರು. ಆ ವಿಷಯದಲ್ಲಿ ಅವರಿಗೊಂದು ಥ್ಯಾಂಕ್ಸ್‌ ಹೇಳಲೇಬೇಕು. ನಾಯಕ-ನಾಯಕಿಯ ಇಗೋ ಕ್ಲಾéಶ್‌ ಮುಂದೆ ಹೇಗೆ ಲವ್‌ಗೆ ಟರ್ನ್ ಆಗುತ್ತದೆಂಬ ಒಂದು ಲೈನ್‌ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕಾಲೇಜ್‌ ಸ್ಟೋರಿ ಎಂದ ಮೇಲೆ ಲವ್‌, ಹೊಡೆದಾಟ, ಸ್ಟೈಲಿಶ್‌ ಸಾಂಗ್‌ ಎಲ್ಲವೂ ಇರುತ್ತದೆ.ಹೊಡೆದಾಟವಷ್ಟೇ ಇದ್ದರೆ ಪ್ರೇಕ್ಷಕರಿಗೆ ಬೋರ್‌ ಆಗಬಹುದೆಂಬ ಕಾರಣಕ್ಕಾಗಿ ಚಿತ್ರದಲ್ಲಿ ಅಲ್ಲಲ್ಲಿ ಟ್ವಿಸ್ಟ್‌-ಟರ್ನ್ಗಳು ಕೂಡಾ ಇವೆಯಂತೆ. ಮ ುಖ್ಯವಾಗಿ ಈ ಸಿನಿಮಾ ಇವತ್ತಿನ ಟ್ರೆಂಡ್‌ಗೆ ಏನು ಬೇಕೋ ಅದು ಈ ಸಿನಿಮಾದಲ್ಲಿ ಇವೆ. ಮುಖ್ಯವಾಗಿ ಇದೊಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ’ ಎಂಬುದು ದಿಲೀಪ್‌ ಪ್ರಕಾಶ್‌ ಮಾತು.

“ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ಅನ್ನು ಜನ ಇಷ್ಟಪಟ್ಟಿದ್ದಾರೆ. ನಾವು ಈ ಮಟ್ಟದ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಈಗಾಗಲೇ ಎಲ್ಲಾ ಕಡೆ ಹೋಗಿ ಸಿನಿಮಾ ಪ್ರಮೋಶನ್‌ ಮಾಡುತ್ತಿದ್ದೇವೆ. ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುತ್ತಾರೆ. ಚಿತ್ರಕ್ಕೆ ರವಿವರ್ಮ ಅವರ ಸಾಹಸವಿದೆ. ದಿಲೀಪ್‌ರಿಂದ ಹೈವೋಲ್ಟೆàಜ್‌ ಆ್ಯಕ್ಷನ್‌ ಮಾಡಿಸಿದ್ದಾರಂತೆ. ಚಿತ್ರದ ಎಲ್ಲಾ ಫೈಟ್‌ಗಳನ್ನು ರವಿವರ್ಮ ಅವರೇ ಮಾಡಿರೋದು ಖುಷಿಕೊಟ್ಟಿದೆ ಎನ್ನುತ್ತಾರೆ ದಿಲೀಪ್‌. ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ, ಶೇಖರ್‌ ಚಂದ್ರು ಛಾಯಾಗ್ರಹಣವಿದೆ.

-ಉದಯವಾಣಿ

Comments are closed.