ಮನೋರಂಜನೆ

ರಿಯೊ 2016: ಪಾರ್ಶ್ವವಾಯುವನ್ನು ಸೋಲಿಸಿ ಪ್ರಕಾಶ್ ನಂಜಪ್ಪ ಒಲಿಂಪಿಕ್‌ಗೆ ಚೊಚ್ಚಲ ಪ್ರವೇಶ

Pinterest LinkedIn Tumblr

rioರಿಯೊ ಡಿ ಜನೈರೊ: ಗ್ರನಾಡಾದಲ್ಲಿ 2013ರ ಐಎಸ್‌ಎಸ್‌ಎಫ್ ವಿಶ್ವ ಕಪ್‌ನಲ್ಲಿ ಪ್ರಕಾಶ್ ನಂಜಪ್ಪ ಅವರು ಪಾರ್ಶ್ವವಾಯು ದಾಳಿಯಿಂದ ನರಳಿದಾಗ ಅವರ ವೃತ್ತಿಜೀವನ ಮುಗಿಯಿತೆಂದು ವೈದ್ಯರು ಹೇಳಿದ್ದರು. ಭಾರತದ ಶೂಟರ್ ಪ್ರಕಾಶ್ ನಂಜಪ್ಪ ಅವರ ಮುಖದ ಬಲಭಾಗದಲ್ಲಿ ಮುಖ್ಯವಾಗಿ ಬೆಲ್ಸ್ ಪಾಲ್ಸಿ ಇರುವುದನ್ನು ಗುರುತಿಸಲಾಯಿತು.

ಆದರೆ ನಂಜಪ್ಪ ಅವರಿಗಿದ್ದ ಮನೋಸಂಕಲ್ಪ ಮತ್ತು ಕ್ರೀಡೆಯ ಬಗ್ಗೆ ಇದ್ದ ಉತ್ಸಾಹ ತಾನು ಪ್ರೀತಿಸುತ್ತಿದ್ದ ಶೂಟಿಂಗ್ ಕ್ರೀಡೆಯನ್ನು ಬಿಡುವುದಕ್ಕೆ ಆಗಲಿಲ್ಲ. ಹಾಗೆ ಬಿಡುವುದು ಜೀವನದ ಭಯಾನಕ ಭಾಗವಾಗಿತ್ತು. ನಾನು ಶೂಟಿಂಗ್ ನಿಲ್ಲಿಸಬೇಕೆಂದು ವೈದ್ಯರು ಹೇಳಿದರು. ಅದು ಸಾಧ್ಯವೇ ಇಲ್ಲವೆಂದು ನಾನು ಉತ್ತರಿಸಿದೆ.ನನ್ನ ಹಠಮಾರಿ ಮನೋಭಾವ ಕಂಡ ವೈದ್ಯರು ನನಗೆ ಪ್ರೇರೇಪಣೆ ನೀಡಿದರೆಂದು ನಂಜಪ್ಪ ಹೇಳಿದರು.

ನಂಜಪ್ಪ ಶ್ರಮಪಟ್ಟು ಅಭ್ಯಾಸ ಮಾಡಿ ಮೂರು ತಿಂಗಳಲ್ಲೇ ಟೆಹರಾನ್ ಏಷ್ಯಾ ಏರ್ ಗನ್ ಚಾಂಪಿಯನ್‌‌ಷಿಪ್‌ನಲ್ಲಿ ಭಾಗವಹಿಸಿ 50 ಮೀ ಏರ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ತಮ್ಮ ಹೆಜ್ಜೆಗುರುತು ಮೂಡಿಸಿದರು.

ಕಳೆದ ಕೆಲವು ವರ್ಷಗಳಿಂದ ನಂಜಪ್ಪ ಉತ್ತಮ ಫಾರಂನಲ್ಲಿದ್ದರು. 2013ರ ಚಾಂಗ್‌ವೋನ್ ವಿಶ್ವ ಕಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2014ರ ಏಷ್ಯನ್ ಕ್ರೀಡಾಕೂಟ 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚು ಮತ್ತು ಬೆಳ್ಳಿ ಪದಕವನ್ನು ಕ್ರಮವಾಗಿ ಗೆದ್ದಿದ್ದರು.

Comments are closed.