ಹೈದ್ರಾಬಾದ್: ತೆಲಗು ನಟಿ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅಭಿನಯದ ‘ಓಂ ನಮೋ ವೆಂಕಟೇಶ್’ ಚಿತ್ರದಲ್ಲಿ ನಾಗಾರ್ಜುನ್ ಜತೆಗೆ ಅನುಷ್ಕಾ ನಟಿಸುತ್ತಿರುವುದು ಎಲ್ಲಿರಗೂ ಗೊತ್ತು. ಇದೀಗ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಕೃಷ್ಣಮ್ಮ ಪಾತ್ರದ ಮೂಲಕ ಹೊಸ ಅವತಾರದಲ್ಲಿ ಮಿಂಚಲಿದ್ದಾರೆ.
ಬಾಬಾ ಹಾಥಿರಾಮ್ ಜೀವನ ಆಧಾರಿತ ಚಿತ್ರ ಇದಾಗಿದ್ದು, ಈ ಚಿಕ್ರದ ಅನುಷ್ಕಾ ಶೆಟ್ಟಿ ಅಭಿನಯದ ಮೊದಲ ಲುಕ್ ಬಿಡುದಡೆಯಾಗಿದೆ. ನಿರ್ದೇಶರ ಜತೆ ನಟಿಸುವುದು ಖುಷಿ ತಂದಿದ್ದು, ಓಂ ನಮೋ ವೆಂಟಕಟೇಶ್ವರ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದೆ ಎಂದು ಅನುಷ್ಕಾ ಶೆಟ್ಟಿ ಬರೆದುಕೊಂಡಿದ್ದಾರೆ.
ಇನ್ನೂ ಮುಂಬರುವ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮೆಗಾಸ್ಟಾರ್ ಚಿರಂಜೀವಿ ಜತೆ ನಟಿಸಲಿದ್ದಾರಂತೆ.. ಈ ಚಿತ್ರ ಚಿರಂಜೀವಿಯವರ 150ನೇ ಚಿತ್ರ. ಈ ಹಿನ್ನೆಲೆಯಲ್ಲಿ ಚಿರಂಜೀವಿ ಜತೆ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಿರುವುದು ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕೂತುಹಲ ಮೂಡಿಸಿದೆ.
ಇದಕ್ಕೂ ಮುನ್ನ ಚಿರಂಜೀವಿ ಜತೆಗೆ ನಯನಾತಾರಾ ಹೆಸರು ಕೇಳಿ ಬಂದಿತ್ತು. ಆದರೆ ಫೈನಲ್ ಆಗಿ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬಂದಿದೆ. ಅಲ್ಲದೇ ಅನುಷ್ಕಾ ಮತ್ತೆರೆಡು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾಳೆ.
Comments are closed.