ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಬಂಗ್ಲಾಗೆ ನುಗ್ಗಿದ ವ್ಯಕ್ತಿಯೊಬ್ಬ ಅವರ ನಿವಾಸದ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆ ವ್ಯಕ್ತಿ ಬಾಗಿಲು ಮುರಿದು ಒಳಗೆ ಪ್ರವೇಶಿಸಲು ಯತ್ನಿಸಿದ್ದು ಯಾಕೆ ಅಂತೀರಾ? ಈ ವರದಿ ನೋಡಿ..
ಪುಣೆ ಮೂಲದ ನಿವಾಸಿಯಾಗಿರುವ ಬುಲೇಟ್ ಯಾದವ್ ಎಂಬಾತ ಅಮಿತಾಬ್ ಬಚ್ಚನ್ ಹುಚ್ಚು ಅಭಿಮಾನಿಯಂತೆ. ಬಿಗ್ ಬಿ ಅವರಿಗೆ ಆತ ಭೋಜ್ಪುರಿ ಹಾಡನ್ನು ಕೇಳಿಸಲು ಬಂದಿದ್ದ. ಅಮಿತಾಬ್ ಇರುವ ಬಂಗ್ಲಾ ಎದುರು ಐದು ದಿನಗಳ ಕಾಲ ಕಾಯುತ್ತಿದ್ದ. ಆದ್ರೆ ಕಡೆಗೂ ಅಮಿತಾಬ್ ಸಿಗದ ಕಾರಣ ನಿವಾಸದ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಲು ಯತ್ನಿಸಿದ್ದಾನೆ.
ಈ ಘಟನೆ ಬಳಿಗ ಮುಂಬೈ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 447ರಂತೆ ದೂರು ದಾಖಲಿಸಿಕೊಂಡಿದ್ದಾರೆ.
ಇನ್ನೂ ಅಮಿತಾಬ್ ಬಚ್ಚನ್ ರವಿವಾರದಂದು ಅವರು ಮನೆಯಲ್ಲೇ ಇರುತ್ತಾರೆ. ನಿವಾಸದ ಹೊರಗಡೆ ಇರುವ ಅಥವಾ ಭೇಟಿಯಾಗಲು ಬಂದಿದ್ದ ಅಭಿಮಾನಿಗಳನ್ನು ಅವರು ಭೇಟಿಯಾಗ್ತಾರೆ. ಎಷ್ಟೇ ಬ್ಯೂಸಿ ಶೆಡ್ಯೂಲ್ ಇದ್ದರೂ ಅಮಿತಾಬ್ ಮಾತ್ರ ತಮ್ಮ ಅಭಿಮಾನಿಗಳನ್ನು ಮಾತ್ರ ಮರೆಯುವುದಿಲ್ಲ.
ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದ ಅಮಿತಾಬ್ ಬಚ್ಚನ್ , ಅವರ ಮುಂಬರುವ ಚಿತ್ರ ಕುಲಿ ಚಿತ್ರದ ಶೂಟಿಂಗ್ ವೇಳೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಆದ್ರೂ ಫ್ಯಾನ್ಸ್‌ಗಳನ್ನು ಭೇಟಿಯಾಗುವುದು ಮಾತ್ರ ಅವರು ಬಿಟ್ಟಿಲ್ಲ. ಆದ್ರೆ ಬುಲೇಟ್ ಯಾದವ್ ಸೆಕ್ಯೂರಿಟಿ ನಿಯಮವನ್ನು ತೊರೆದು ಒಳಗೆ ಪ್ರವೇಶಿಸಲು ಯತ್ನಿಸಿದ್ದರು. ಆದ್ದರಿಂದ ಪೊಲೀಸ್ ಬುಲೇಟ್ ಯಾದವ್‌ರನ್ನು ಬಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
Comments are closed.