ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಟಿಯರ ಬಗ್ಗೆ ಅವಮಾನಕರವಾದ ಪದ ಬಳಕೆಯ ಕಮೆಂಟ್ಗಳನ್ನು ಮಾಡಿರುವ ಆರೋಪದ ಮೇಲೆ ನಟ, ಲೇಖಕ, ನಿರ್ಮಾಪಕ ಕಮಾಲ್ ರಷಿದ್ ಖಾನ್ ಅಲಿಯಾಸ್ ‘ಕೆಆರ್ಕೆ’ ವಿರುದ್ಧ ಪ್ರಕರಣ ದಾಖಲಾಗಿದೆ.
ಟ್ವಿಟರ್ನಲ್ಲಿ ನಟಿಯರು, ರೂಪದರ್ಶಿಯ ಬಗ್ಗೆ ಅವಹೇಳನಕಾರಿಯಾದ ಸ್ಟೇಟಸ್ಗಳನ್ನು ಪೋಸ್ಟ್ ಮಾಡಿರುವ ಕೆಆರ್ಕೆ ಈಗ ಗಂಭೀರವಾದ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಮುಂಬೈ ಮೂಲದ ನ್ಯಾಯವಾದಿ ರಿಜ್ವಾನ್ ಸಿದ್ದಿಕಿ ಎನ್ನುವವರು ಕೆಆರ್ಕೆ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ, ನಟಿಯರಿಗೆ ಟ್ವಿಟರ್ನಲ್ಲಿ ಲೈಂಗಿಕತೆ ಸಂಬಂಧಿಸಿದ ಮೆಸೇಜ್ಗಳನ್ನು ಕಳುಹಿಸಿ ಅವಮಾನಗೊಳಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
Comments are closed.