ಬೆಂಗಳೂರು: ದುನಿಯಾ ರಶ್ಮಿ ಮತ್ತೆ ದೊಡ್ಡ ಪರದೆ ಮೇಲೆ ಕಮ್ ಬ್ಯಾಕ್ ಆಗಿದ್ದಾರೆ. ನಿರ್ದೇಶಕ ನೂತನ ಉಮೇಶ್ ಥ್ರೀಲ್ಲರ್ ಚಿತ್ರ ಅಸ್ತಿತ್ವ ಚಿತ್ರದ ಮೂಲಕ ಮತ್ತೆ ಎಂಟ್ರಿ ನೀಡಿದ್ದಾರೆ. ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ದುನಿಯಾ ರಶ್ಮಿ, ಈ ಚಿತ್ರದಲ್ಲಿ ನನ್ನನ್ನು ಹೊಸ ಅವತಾರದಲ್ಲಿ ನೋಡಬಹುದು ಎಂದು ತಿಳಿಸಿದ್ದಾರೆ.
ತನ್ನ ಹೊಸ ಲುಕ್ ಬಗ್ಗೆ ಎಕ್ಸೈಟ್ ಆಗಿದ್ದಾರಂತೆ. ನಾಯಕನ ಗರ್ಲ್‌ಫ್ರೆಂಡ್ ಪಾತ್ರದಲ್ಲಿ ಮಿಂಚುತ್ತಿರುವ ಅವರು ಇಲ್ಲಿ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ.
ಶೂಟಿಂಗ್ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿರುವ ರಶ್ಮಿ, ಶೂಟಿಂಗ್ ವೇಳೆ ಎಲ್ಲರೂ ಎಂಜಾಯ್ ಮಾಡಿದ್ದೇವೆ… ಇಡೀ ಟೀಮ್ ಸಂಪೋರ್ಟಿವ್ ಆಗಿತ್ತು. ಬೇರೆವರಿಗೆ ಹೋಲಿಸಿದ್ರೆ, ನಾನೇ ಸೆಟ್‌ನಲ್ಲಿ ಸೀನಿಯರ್ ಆಗಿದ್ದೆ, ಆದ್ದರಿಂದ ಎಲ್ಲರೂ ಕೇರ್ ತೆಗೆದುಕೊಂಡು ತುಂಬಾ ಗೌರವ ನೀಡಿದ್ದರು ಎಂದು ತಿಳಿಸಿದರು.
ಇದೇ ನಿರ್ದೇಶಕ ಉಮೇಶರನ್ನು ಹೊಗಳಿದ ರಶ್ಮಿ, ನಾನು ತುಂಬಾ ಜನ ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದೇನೆ. ಚಿತ್ರದಲ್ಲಿನ ನನ್ನ ಕ್ಯಾರೆಕ್ಟರ್ ಮೇಕಪ್, ಹೇರ್‌ಸ್ಟೈಲ್ ಎಲ್ಲಾ ಬಗ್ಗೆ ಅರಿತಿದ್ದ ಅವರು ಸಣ್ಣ ದೃಶ್ಯಗಳಿಗೆಲ್ಲಾ ರಿಟೇಕ್ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.
Comments are closed.