ಕಲನಾ-2 – “ಇದನ್ನು ಮಾಡ್ತೀವಿ ಅಂತ ಮೂರ್‍ನಾಲ್ಕು ಜನ ಬಂದಿದ್ದರು. ನಂಗೆ ಭಯ ಇತ್ತು. ಬೇಡ ಅಂತಾನೇ ಹೇಳಿ ಕಳುಹಿಸಿದ್ದೆ. ಆದರೆ, ರಾಜೇಂದ್ರ ಬಂದು ಫೋರ್ಸ್ ಮಾಡಿದ್ರು. ಅವ್ರಿಗೂ ನಾನು ಹೆವಿ ಗ್ರಾಫಿಕ್ಸ್ ಇದೆ. ಬೇಡ ಅಂದಿದ್ದೆ. ಆದ್ರೂ ಅವರಿಗೆ “ಕಲ್ಪನಾ’ ಮೇಲೆ ಇದ್ದ ಪ್ರೀತಿಗೆ ಒಪ್ಪಿಕೊಂಡೆ. ಆದರೂ ನಂಬಿಕೆ ಇರಲಿಲ್ಲ. ಸಿನಿಮಾ ಶುರುವಾದಾಗ ನಂಬಿಕೆ ಜಾಸ್ತಿಯಾಯ್ತು. ನಂಬಿದರೆ ದೆವ್ವ ಕೂಡ ಕೈ ಬಿಡೋದಿಲ್ಲ ಅಂತ “ಕಲ್ಪನಾ-2′ ಸಾಬೀತು ಮಾಡಿತು…’ ಹೀಗೆ ಹೇಳಿದ್ದು ಉಪೇಂದ್ರ.
“ಕಲ್ಪನಾ-2′ ಸಕ್ಸಸ್ ಆಗಿದೆ ಅಂತ ಹೇಳ್ಳೋಕೆ ನಿರ್ಮಾಪಕ ರಾಜೇಂದ್ರ ಪತ್ರಕರ್ತರನ್ನು ಆಹ್ವಾನಿಸಿದ್ದರು. ಅಂದು ಉಪೇಂದ್ರ “ಕಲ್ಪನಾ-2′ ಕುರಿತು ಹೇಳುತ್ತಾ ಹೋದರು. ಎಲ್ಲರೂ ಇಲ್ಲಿ ಪ್ರೀತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಪ್ರಯತ್ನ ನಮ್ಮದಾಗಿತ್ತು. ಫಲ ದೇವ್ರು ಕೊಟ್ಟಿದ್ದಾನೆ. ಇಲ್ಲಿ ನಾನು ಪಾತ್ರಧಾರಿ ಅಷ್ಟೇ. ಎಲ್ಲಾ ಯಶಸ್ಸು ನಿರ್ಮಾಪಕ ರಾಜೇಂದ್ರ ಮತ್ತು ನಿರ್ದೇಶಕ ಅನಂತರಾಜು ಅವರಿಗೆ ಸಲ್ಲಬೇಕು. ಇಲ್ಲಿ ಆವಂತಿಕಾ ಶೆಟ್ಟಿ ಚೆನ್ನಾಗಿ ನಟಿಸಿದ್ದಾರೆ.
ಮೊದಲು ಆ ಹುಡುಗಿ ಬಂದಾಗ, ನಿರ್ದೇಶಕರಿಗೆ ಹೇಳಿದ್ದೆ, ಏನ್ರೀ, ಪಾತ್ರ ತುಂಬಾ ಡಿμಕಲ್ಟ್ ಆಗಿದೆ. ಆ ಹುಡುಗಿ ಮಾಡ್ತಾಳೇನ್ರೀ ಅಂತ. ಆದರೆ, ಕ್ಯಾಮೆರಾ ಮುಂದೆ ಆವಂತಿಕಾ ಶೆಟ್ಟಿ ನಿಂತು ನಟಿಸಿದಾಗ, ಒಳ್ಳೇ ನಟಿ ಅನಿಸ್ತು. ಪ್ರಿಯಾಮಣಿ ಕೂಡ ಚಾಲೆಂಜಿಂಗ್ ಪಾತ್ರದಲ್ಲಿ ಗೆದ್ದಿದ್ದಾರೆ. ನಾನಿಲ್ಲಿ ಎರಡು ಪಾತ್ರವನ್ನು ಬ್ಯಾಲೆನ್ಸ್ ಮಾಡಿದ್ದೇನಷ್ಟೇ’ ಅಂದರು ಉಪೇಂದ್ರ. ಅಂದು ನಿರ್ಮಾಪಕ ರಾಜೇಂದ್ರ ಅವರ ಮೊಗದಲ್ಲಿ ಜೋಶ್ ಇತ್ತು. ಅದಕ್ಕೆ ಕಾರಣ, “ಕಲ್ಪನಾ-2′ ಯಶಸ್ವಿ ಪ್ರದರ್ಶನ.
ವೇದಿಕೆ ಮೇಲೆ ಚಿತ್ರದ ವಿವರ ಕೊಡುವ ಬದಲು, ತಮ್ಮದೇ ಶೈಲಿಯ ಮಾತುಗಳ ಮೂಲಕ ರಂಜಿಸಿದರು. ಅಲ್ಲೇ, ಆ್ಯಕ್ಷನ್ ಮಾಡುತ್ತಲೇ ಒಂದಷ್ಟು ನಕ್ಕು, ನಗಿಸಿದರು. ಪತ್ರಕರ್ತರ ಮುಂದೆ ಸಣ್ಣದ್ದೊಂದು ಕಥೆ ಕಟ್ಟಿದರು. ಒಂದಷ್ಟು ಸ್ಕ್ರೀನ್‌ಪ್ಲೇ ಕೂಡ ಹೇಳಿದರು. ಮಕ್ಕಳಂತೆ ವೇದಿಕೆ ಮೇಲೆ ನಟನೆ ಮಾಡೋಕೂ ಮುಂದಾದರು. ಮತ್ತೂಮ್ಮೆ ರಿಪೀಟ್ ಮಾಡ್ರಿ ಅಂದರೂ, ಮತ್ತದೇ ಜೋಶ್‌ನಲ್ಲಿ “ಆಟ’ ತೋರಿಸುತ್ತಲೇ ನಕ್ಕರು, ನಗೆಪಾಟಿಲಾದರು.
ಆದರೆ, ಕಲೆಕ್ಷನ್ ಬಗ್ಗೆ ಮಾತ್ರ ಎಲ್ಲೂ ಬಾಯಿ ಬಿಡಲಿಲ್ಲ. “ಕಲ್ಪನಾ-2′ ಆಯ್ತು, ಮುಂದಾ? ಎಂಬ ಪ್ರಶ್ನೆಗೆ, “ಕಲ್ಪನಾ-3′ ಮಾಡ್ತೀನಿ, ಅದಕ್ಕೂ ಮುಂಚೆ “ಕಾಂಚನಾ-3′ ಬರತ್ತಾ ನೋಡಬೇಕು’ ಅಂದ್ರು. ಉಪ್ಪಿ ಯೆಸ್ ಅಂದರೆ, ಈಗಲೇ ಅದಕ್ಕೂ ಅಡ್ವಾನ್ಸ್ ಕೊಡ್ತೀನಿ ಅಂತೆಲ್ಲಾ ಹೇಳಿದ್ರು. ಅವರ ಮಾತು ಮುಂದುವರೆಯುತ್ತಲೇ ಇತ್ತು. ಮಧ್ಯೆ ಪತ್ರಕರ್ತರು, ಪ್ರಿಯಾಮಣಿ ಅವರಿಗೆ ಮೈಕ್ ಕೊಡಿ ಅಂದಾಗ, ಮಾತಿಗೆ ಫುಲ್‌ಸ್ಟಾಪ್ ಹಾಕಿ ಪ್ರಿಯಾಮಣಿ ಕೈಗೆ ಮೈಕ್ ಕೊಟ್ಟರು. “ರಾಜೇಂದ್ರ ಅವರಿಗೆ “ದೆವ್ವ’ದ ಮೇಲೆ ಪ್ರೀತಿ ಜಾಸ್ತಿ. ಆ ಕಾರಣಕ್ಕೆ “ಕಲ್ಪನಾ-2′ ತುಂಬಾ ಚೆನ್ನಾಗಿ ಬಂದಿದೆ. ನೋಡಿದವರೂ ಅದನ್ನು ಒಪ್ಪಿದ್ದಾರೆ.
ಒಳ್ಳೇ ಟೀಮ್ ಇರುವುದರಿಂದಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಅಂದಷ್ಟೇ ಹೇಳಿ ಸುಮ್ಮನಾದರು ಪ್ರಿಯಾಮಣಿ. ನಿರ್ದೇಶಕ ಅನಂತರಾಜುಗೆ,ಕಷ್ಟಪಟ್ಟಿದ್ದಕ್ಕೆ ದೆವ್ವ ಕೃಪೆ ತೋರಿದೆಯಂತೆ.
-ಉದಯವಾಣಿ
Comments are closed.