ಮನೋರಂಜನೆ

ಕೃಷ್ಣಮೃಗ ಭೇಟೆ ಪ್ರಕರಣ: ಸಲ್ಲು ಮಿಯಾ ನಿರ್ದೋಷಿ

Pinterest LinkedIn Tumblr

salmankhan-courtಜೈಪುರ: ಸುದೀರ್ಘ 18 ವರ್ಷಗಳ ಬಳಿಕ ನಿರ್ದೋಷಿ ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದ್ದು ಸಲ್ಲು ಮಿಯಾ ಈಗ ನಿರಾಳಗೊಂಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ ಕ್ಲೀನ್ ಚಿಟ್‌ ನೀಡಿ ಮಹತ್ವದ ತೀರ್ಪು ನೀಡಿದೆ.

ಇದಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್‌ಗೆ ಮೊದಲ ಪ್ರಕರಣದಲ್ಲಿ 5 ವರ್ಷ ಹಾಗೂ ಎರಡನೇ ಪ್ರಕರಣದಲ್ಲಿ 1 ವರ್ಷ ಸೆರೆವಾಸ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ರಾಜಸ್ಥಾನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇ ಕೊನೆಯ ವಾರದಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೋಮವಾರ ತೀರ್ಪನ್ನು ನೀಡಿದೆ. .

1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣ ವೇಳೆ ಜೋಧಪುರದ ಹೊರವಲಯದ ಭಾವದ್ ರಕ್ಷೀತಾರಣ್ಯದಲ್ಲಿ ಸಲ್ಮಾನ್ ಖಾನ್ ಜತೆ ಇನ್ನಿತರ 7 ಜನ ಕೃಷ್ಣಮೃಗ ಬೇಟೆಯಾಡಿದ ಆರೋಪದಡಿ ಕೇಸ್ ದಾಖಲಿಸಲಾಗಿತ್ತು. ಸಲ್ಮಾನ್ ಖಾನ್ ಕೆಲ ದಿನ ಜೋಧಪುರ ಜೈಲಿನ ಅತಿಥಿಯಾಗಿದ್ದರು ಕೂಡಾ. ಈಗ 18 ವರ್ಷಗಳಿಂದ ನಡೆದು ಬಂದಿದ್ದು ಪ್ರಕರಣಕ್ಕೆ ತೆರೆ ಬಿದ್ದಿದ್ದು ಸಲ್ಮಾ ಖಾನ್ ಹಾಗೂ ಅವರ ಕುಟುಂಬಸ್ಥರಿಗೆ ಸಂತಸ ತಂದಿದೆ.

Comments are closed.