ಮನೋರಂಜನೆ

ರಿಯೊ ಒಲಿಂಪಿಕ್ಸ್: ಎಲೆಕ್ಟ್ರೋಮ್ಯಾಗ್ನೆಟಿಕ್ ತಂತ್ರಜ್ಞಾನ ಬಳಸಿದ ಅಭಿನವ್ ಭಿಂದ್ರಾ

Pinterest LinkedIn Tumblr

abhiನವದೆಹಲಿ: ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಪರಿಪೂರ್ಣತೆ ಪ್ರದರ್ಶಿಸಿ ಪದಕ ಗೆಲ್ಲುವುದಕ್ಕೆ ಏಸ್ ಶೂಟರ್ ಅಭಿನವ್ ಭಿಂದ್ರಾ ವಿದ್ಯುತ್‌ಕಾಂತೀಯ ವ್ಯವಸ್ಥೆ ಎಂದು ಕರೆಯುವ ವೈಜ್ಞಾನಿಕ ವಿಧಾನಕ್ಕೆ ಒಡ್ಡಿಕೊಂಡಿದ್ದಾರೆ. ಈ ವಿಧಾನದ ಮೂಲಕ ನರಮಂಡಲದ ಕಾರ್ಯನಿರ್ವಹಣೆ ಚುರುಕುಗೊಳಿಸುವುದು ಅವರ ಗುರಿಯಾಗಿದೆ. ಒಲಿಂಪಿಕ್ ಶೂಟರ್ ಚಾಂಪಿಯನ್ ಪ್ರಸಕ್ತ ಮ್ಯುನಿಚ್‌ನಲ್ಲಿದ್ದು, ರಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಿದ್ದಾರೆ.

ತಮ್ಮ ಪುತ್ರನ ಪ್ರಗತಿಗೆ ತಮ್ಮದೇ ಆದ ಪಾತ್ರ ವಹಿಸಿರುವ ಅವರ ತಂದೆ ಅಪಜಿತ್ ಭಿಂದ್ರಾ ಭಾರತದ ಏಕಮಾತ್ರ ಒಲಿಂಪಿಕ್ ಚಿನ್ನದ ಪದಕ ವಿಜೇತ ಪುತ್ರ ತಮ್ಮ ಜತೆ ಮಾತನಾಡುವುದಕ್ಕೆ ಸಿಗುವುದೇ ಅಪರೂಪವಾಗಿದೆ ಎಂದು ಹೇಳಿದ್ದಾರೆ.

ಅಭಿನವ್ ವಿದ್ಯುತ್ ಕಾಂತೀಯ ವ್ಯವಸ್ಥೆ ಬಳಸುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಕರೆಂಟ್ ದೇಹದೊಳಗೆ ಹರಿಸಿದಾಗ ಸೀದಾ ನರಮಂಡಲದೊಳಕ್ಕೆ ಹೋಗಿ ನರಮಂಡಲದ ಕಾರ್ಯನಿರ್ವಹಣೆ ವೃದ್ಧಿಸುತ್ತದೆ. ಇದೊಂದು ಸಂಕೀರ್ಣ ವಿಧಾನವಾಗಿದೆ ಎಂದರು.

Comments are closed.