ಮನೋರಂಜನೆ

ಬೆಂಗಳೂರಲ್ಲಿ ವಿರಾಟ್-ಅನುಶ್ಕಾ ಗುಟ್ಟಾಗಿ ಭೇಟಿ.. ಪ್ರತಿಕ್ರಿಯೆ ನೀಡಿದ ನಟಿ ಅನುಷ್ಕಾ

Pinterest LinkedIn Tumblr

viratದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬೆಂಗಳೂರಲ್ಲಿ ವಿರಾಟ್ ಕೊಹ್ಲಿಯನ್ನು ಬೆಂಗಳೂರಲ್ಲಿ ಗುಟ್ಟಾಗಿ ಭೇಟಿ ಮಾಡಿದ್ದರು ಎಂದು ವದಂತಿ ಹರಡಿತ್ತು. ಈ ಬಗ್ಗೆ ಮಾತನಾಡಿರುವ ಅನುಷ್ಕಾ ಶರ್ಮಾ, ಇದೆಲ್ಲಾ ಸುಳ್ಳು ಎಂದು ಅನುಷ್ಕಾ ಶರ್ಮಾ ತಿಳಿಸಿದ್ದಾರೆ.
ಸುಲ್ತಾನ ಶೂಟಿಂಗ್‌ನಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡು ವಿರಾಟ್ ಕೊಹ್ಲಿಯವರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗಿತ್ತು.

ಬೆಂಗಳೂರಲ್ಲಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಯವರನ್ನು ಗುಟ್ಟಾಗಿ ಭೇಟಿ ಮಾಡಿದ್ದಾರೆ ಎಂದಿರುವ ಸುದ್ದಿ ಸುಳ್ಳು ಎಂದು ಅನುಷ್ಕಾ ತಿಳಿಸಿದ್ದಾರೆ.

ಅನುಷ್ಕಾಗೆ ಆರೋಗ್ಯ ಸರಿಯಿರಲಿಲ್ಲ.. ಅನಾರೋಗ್ಯವಿದ್ರೂ ಅನುಷ್ಕಾ ಸುಲ್ತಾನ್ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅನುಷ್ಕಾ ಮುಂಬೈಯಲ್ಲಿ ಇದ್ದದ್ದು ಗೊತ್ತಿದ್ದರು ಅವರು ಬೆಂಗಳೂರಲ್ಲಿ ಇದ್ದಾರೆ ಎನ್ನುವ ಸುದ್ದಿ ನಿರಾಶಾದಾಯಕ ಎಂದು ನಟಿ ಅನುಷ್ಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಶೂಟಿಂಗ್ ಸೆಟ್‌ಲ್ಲಿ ಭೇಟಿ ಮಾಡಿದ್ದರು. ಅಲ್ಲದೇ ಏರಪೋರ್ಟ್‌ಲ್ಲು ಅನುಷ್ಕಾ ಹಾಗೂ ವಿರಾಟ್ ಭೇಟಿ ಮಾಡಿದ್ದರ ಕುರಿತು ಎಲ್ಲೆಡೆ ಸಾಕಷ್ಟು ಸುದ್ದಿ ಮಾಡಿತ್ತು.

ಇನ್ನೂ ಸುಲ್ತಾನ್ ಚಿತ್ರದಲ್ಲಿ ಬ್ಯೂಸಿ ಇರುವ ಅನುಷ್ಕಾ ಶರ್ಮಾ ತಮ್ಮದೇ ಆದ ಪ್ರೋಡೆಕ್ಷನ್ ಮೂವೀ ಫಿಲ್ಲೋರಿ ಚಿತ್ರದಲ್ಲಿ ಹಾಗೂ ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಸಹ ಅನುಷ್ಕಾ ನಟಿಸುತ್ತಿದ್ದಾರೆ.

ಈದ್ ಹಬ್ಬದಂದು ಚಿತ್ರ ರಿಲೀಸ್ ಆಗುತ್ತಿದೆ. ಅಭಿಮಾನಿಗಳಲ್ಲಿ ಚಿತ್ರದ ಸಾಂಗ್ ಗಳು ಮೆಚ್ಚುಗೆ ಆಗ್ತಿವೆ. ಚಿತ್ರದ ಸಾಂಗ್ ನೋಡಿದ್ರೆ ಸಲ್ಮಾನ್ ಹಾಗೂ ಅನುಷ್ಕಾ ಶರ್ಮಾರ ಡ್ಯಾನ್ಸಿಂಗ್ ಸ್ಕಿಲ್ಸ್ ಅದ್ಭುತವಾಗಿ ಮೂಡಿ ಬಂದಿದೆ.

ಅಲ್ಲದೇ ಸಾಂಗ್ ಕಂಪೋಸ್ ಮಾಡಿದ್ದಾರೆ ವಿಶಾಲ್ ದಾದಲಾನಿ ಹಾಗೂ ಶೇಖರ್ ರವಿಜಾನಿ..ಚಿತ್ರದಲ್ಲಿ ಕುಸ್ತಿಪಟು ಪಾತ್ರಕ್ಕಾಗಿ ಸಲ್ಮಾನ್ ಸಾಕಷ್ಟು ತರಬೇತಿ ಪಡೆಯುತ್ತಿದ್ದಾರಂತೆ. ಯಶ್‌ರಾಜ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸುಲ್ತಾನ್ ಚಿತ್ರದಲ್ಲಿ ಅನುಶ್ಕಾ ಶರ್ಮಾ ಸೇರಿದಂತೆ ಹಲವರು ಇದ್ದಾರೆ.

Comments are closed.