ಮನೋರಂಜನೆ

ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಿದ ಶಾರೂಖ್ ಖಾನ್..ಪುತ್ರಿಯ ಬಿಕಿನಿ ವಿಚಾರಕ್ಕೆ ಫುಲ್ ಗರಂ

Pinterest LinkedIn Tumblr

sharukhಮುಂಬೈ: ಸಿನಿದುನಿಯಾದಲ್ಲಿ ಸೆಲೆಬ್ರಿಟಿಗಳು ಯಾವಾಗಲು ಗಾಸಿಪ್‌ಗೆ ಆಹಾರವಾಗುತ್ತಾರೆ. ಅದರಲ್ಲೂ ಸೆಲೆಬ್ರಿಟಿ ಅದ್ಮೇಲೆ ಇದೆಲ್ಲಾ ಮಾಮೂಲು. ಸೆಲೆಬ್ರಿಟಿಗಳು ಬುದ್ಧಿವಂತರಾಗಿದ್ದರೆ ಆಡಿಕೊಳ್ಳುವವರ ಬಾಯಿ ಮುಚ್ಚಿಸುತ್ತಾರೆ. ಇಲ್ಲವಾದರೆ ಆಡಿಕೊಳ್ಳುವವರ ಬಾಯಿಗೆ ಭರ್ಜರಿ ಆಹಾರವಾಗುತ್ತಾರೆ. ಸದ್ಯ ಶಾರೂಖ್ ಖಾನ್ ಗಾಸಿಪ್ ಪ್ರಿಯರ ಬಾಯಿಗೆ ಬೀಗ ಹಾಕಿದ್ದಾರೆ.

ಬಾಲಿವುಡ್ ನಟ ಕಿಂಗ್ ಖಾನ್ ಶಾರೂಖ್ ತಮ್ಮ ಮಗಳ ಬಿಕಿನಿ ಫೊಟೋಗೆ ಸಂಬಂಧಪಟ್ಟಂತೆ ಮೌನ ಮುರಿದಿದ್ದಾರೆ. ಶಾರೂಖ್ ನೀಡಿದ ಉತ್ತರ ಎಲ್ಲರನ್ನು ಬಾಯಿ ಮುಚ್ಚಿಸುವಂತೆ ಮಾಡಿದೆ. ಕೆಲ ದಿನದ ಹಿಂದೆ ಶಾರೂಖ್ ಪುತ್ರಿ ಸುಹಾನಾ ಬಿಕಿನಿಯಲ್ಲಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದವು. ಫೊಟೋದಲ್ಲಿ ಸುಹಾನಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಳು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶಾರೂಖ್ ಈ ಕುರಿತು ಪ್ರತಿಕ್ರಿಯೆ ನೀಡದ್ದಾರೆ. ಸುಹಾನ್ ಸಹೋದರನ ಜತೆ ಸಮುಂದ್ರದ ಹತ್ತಿರ ಇದ್ದಳು. ಈ ವೇಳೆ ನನ್ನ ಮಗಳ ಬಿಕಿನಿಯಲ್ಲಿರುವ ಫೊಟೋಗಳು ಮಾಧ್ಯಮಕ್ಕೆ ಹೆಡ್‌ಲೈನ್ ಆದವು. ನನ್ನ ಮಗಳು 16 ವರ್ಷದವಳಾಗಿದ್ದಾಳೆ. ಈ ಸುದ್ದಿ ತಿಳಿದ ನನ್ನ 16 ವರ್ಷದ ಮಗಳು ಸುಹಾನ್ ಮೇಲೆ ಪರಿಣಾಮ ಬೀರಿದೆ. ಆಕೆ ತೀವ್ರ ಮುಜುಗರಕ್ಕೆ ಒಳಪಟ್ಟಳು. ಸಣ್ಣ ವಿಷಯ ಇಷ್ಟರ ಮಟ್ಟಿಗೆ ದೊಡ್ಡದಾಯಿತು ಎಂದು ಹೇಳುವ ಮೂಲಕ ಶಾರೂಖ್ ಆಡಿಕೊಳ್ಳುವವರ ಬಾಯಿಗೆ ಬೀಗ ಜಡಿದಿದ್ದಾರೆ.

ನಾನು ನನ್ನ ಮಗಳನ್ನು ಮಾಧ್ಯಮದವರಿಂದ ರಕ್ಷಣೆ ಮಾಡುತ್ತಿದ್ದೇನೆ ಎಂದು ಶಾರೂಖ್ ಹೇಳುವ ಮೂಲಕ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಿದ್ದಾರೆ.

Comments are closed.