ಮನೋರಂಜನೆ

ಐಸಿಸಿ 39ನೇ ಸಹ ಸದಸ್ಯ ರಾಷ್ಟ್ರವಾಗಿ ಸೌದಿ ಅರೇಬಿಯಾ ಆಯ್ಕೆ

Pinterest LinkedIn Tumblr

iccಎಡಿನ್‌‌ಬರ್ಗ್‌: ಸೌದಿ ಅರೇಬಿಯಾವನ್ನು ಐಸಿಸಿಯ 39ನೇ ಸಹ ಸದಸ್ಯ ರಾಷ್ಟ್ರವಾಗಿ ಹೆಸರಿಸಲಾಗಿದೆ. ಎಡಿನ್‌ಬರ್ಗ್‌ನಲ್ಲಿ ಗುರುವಾರ ಐಸಿಸಿ ಪೂರ್ಣ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಐಸಿಸಿ ಸಹ ಸದಸ್ಯರಾಗಿದ್ದಕ್ಕೆ ನಾನು ಸೌದಿ ಕ್ರಿಕೆಟ್ ಕೇಂದ್ರವನ್ನು ಅಭಿನಂದಿಸುತ್ತೇನೆ. ಈ ಪ್ರದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಮತ್ತು ಉತ್ತೇಜನಕ್ಕೆ ಸಕಾರಾತ್ಮಕ ಮತ್ತು ಕ್ರಿಯಾಶೀಲ ಪಾತ್ರವನ್ನು ಸೌದಿ ವಹಿಸುತ್ತದೆಂದು ತಾವು ಆಶಿಸುವುದಾಗಿ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿದರು.

ಅಧಿಕೃತ ಐಸಿಸಿ ಪ್ರಕಟಣೆ ಪ್ರಕಾರ, ಸೌದಿ ಕ್ರಿಕೆಟ್ ಕೇಂದ್ರವು 2003ರವರೆಗೆ ಐಸಿಸಿ ಅಫಿಲಿಯೇಟ್ ಸದಸ್ಯನಾಗಿದ್ದು, 2015ರ ಅಕ್ಟೋಬರ್‌ನಲ್ಲಿ ಐಸಿಸಿ ಅಭಿವೃದ್ಧಿ ಸಮಿತಿಯು ಪೂರ್ವ ಅನುಮೋದನೆ ನೀಡಿತ್ತು. 2016ರ ಮಾರ್ಚ್‌ನಲ್ಲಿ ಐಸಿಸಿ ತಪಾಸಣೆ ನಡೆಸಿತ್ತು.

Comments are closed.