ಮನೋರಂಜನೆ

ಪುತ್ರನಿಗಾಗಿ ಡಿಸ್ನಿಲ್ಯಾಂಡ್‌ಗೆ ತೆರಳಲಿರುವ ನಟ ಇಮ್ರಾನ್ ಹಶ್ಮಿ..

Pinterest LinkedIn Tumblr

hashmi

ಮುಂಬೈ: ಬಹುದಿನಗಳಿಂದ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ಇಮ್ರಾನ ಹಶ್ಮಿ ಪುತ್ರ ಆಯಾನ್ ಜತೆಗೆ ಹಾಲಿಡೇ ಕಳೆಯುತ್ತಿದ್ದಾರೆ. ಕೆಲ ಕಾಲ ಬ್ರೇಕ್ ತೆಗೆದುಕೊಂಡಿರುವ ಇಮ್ರಾನ್ ಹಶ್ಮಿ ಕೆನಡಾದಲ್ಲಿ ತಮ್ಮ ಫ್ಯಾಮಿಲಿ ಜತೆಗೆ ವೆಕೇಷನ್ ಕಳೆಯುತ್ತಿದ್ದಾರೆ. ಇನ್ನೂ ವಿಶೇಷ ಅಂದ್ರೆ ಪುತ್ರನಿಗಾಗಿ ಸರ್‌ಪ್ರೈಜ್ ಟ್ರಿಪ್ ಕೂಡ ಅರೇಂಜ್ ಮಾಡಿದ್ದಾರಂತೆ.

ಇಮ್ರಾನ್ ಹಶ್ಮಿ ವೈಯಕ್ತಿಕ ಜೀವನದಲ್ಲಿ ಪುತ್ರ ಆಯಾನ್ ಕ್ಯಾನ್ಸರ್ ವಿರುದ್ದ ಹೋರಾಟ ಮಾಡುತ್ತಿದ್ದಾನೆ. ಮಗನಿಗಾಗಿ ಇಮ್ರಾನ್ ಡಿಸ್ನಿಲ್ಯಾಂಡ್‌ಗೆ ಭೇಟಿ ನೀಡಲಿದ್ದಾರಂತೆ. ಡಿಸ್ನಿಲ್ಯಾಂಡ್‌ಗೆ ತೆರಳೋದು ಪುತ್ರನಿಗೆ ತುಂಬಾ ಇಷ್ಟವಂತೆ ಹಾಗಾಗಿ ಆಯಾನ್‌ಗಾಗಿ ಸರ್‌ಪ್ರೈಜ್ ನೀಡ್ತಾರಂತೆ ಇಮ್ರಾನ್ ಹಶ್ಮಿ… ಇನ್ನೂ ಸದ್ಯ ಕೆನಡಾದಲ್ಲಿ ಹಾಲಿಡೇ ಕಳೆಯುತ್ತಿರುವ ಇಮ್ರಾನ್ ಹಶ್ಮಿ ಅದಾದ ಬಳಿಕ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

ಕಡೆಯದಾಗಿ ಅವರು ಡಿಸ್ನಿಲ್ಯಾಂಡ್ ಕ್ಯಾಲಿಪೋರ್ನಿಯಾಗೆ ತೆರಳಲಿದ್ದಾರೆ. ಅದು ಜೂನ್ 29ರಂದು ತೆರಳುವ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಬಹುದಿನಗಳಿಂದ ಬ್ಯೂಸಿಯಾಗಿದ್ದ ಇಮ್ರಾನ್ ಹಶ್ಮಿ ಇದೀಗ್ ಪುತ್ರನ ಜತೆಗೆ ಎಂಜಾಯ್ ಮಾಡುತ್ತಿದ್ದಾರೆ. ಅಜರ್ ಚಿತ್ರದಲ್ಲಿ ನಟ ಇಮ್ರಾನ್ ಹಶ್ಮಿ ನಟಿಸಿದ್ದರು. ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ.

Comments are closed.