ಮನೋರಂಜನೆ

ನನ್ನ ಮೂವರು ಮಕ್ಕಳು ನನ್ನ ಫ್ಯಾನ್ ಅಲ್ಲ – ಅನಿಲ್ ಕಪೂರ್

Pinterest LinkedIn Tumblr

sಮುಂಬೈ” ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದ ಅನಿಲ್ ಕಪೂರ್, ತಮ್ಮದೇ ಆದ ಅಮೋಘ ಅಭಿನಯದಿಂದ ಅಪಾರ ಅಭಿಮಾನಿಗಳು ಮನಸ್ಸು ಗೆದ್ದಿದ್ದಾರೆ. ತಮ್ಮ ಚಿತ್ರ ಜಗತ್ತಿನ ಫ್ಯಾಮಿಲಿ, ಮಕ್ಕಳ ಕುರಿತಂತೆ ಅನಿಲ್ ಕಪೂರ್ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ನನ್ನ ಫ್ಯಾಮಿಲಿಯಲ್ಲಿ ನನ್ನ ಮೂವರು ಮಕ್ಕಳು ನನ್ನ ಅಭಿಮಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಫ್ಯಾಮಿಲಿಯಲ್ಲಿ ನನ್ನ ಮೂವರು ಮಕ್ಕಳು ನನ್ನ ಅಭಿಮಾನಿಯಾಗಿಲ್ಲ ಎಂದು ತಿಳಿಸಿರುವ ಅವರು. ಅನಿಲ್ ಕಪೂರ್ ತಮ್ಮ ಮಕ್ಕಳಾದ ಸೋನಮ್ ಕಪೂರ್, ರೀಹಾ ಕಪೂರ್ ಹಾಗೂ ಹರ್ಷವರ್ಧನ ಮೂವರು ಫಿಲ್ಮ್ಂ ಸ್ಟಾರ್‌ಗಳಾಗಿದ್ದಾರೆ. ಆದ್ರೆ ನಾವು ಯಾರು ನಮ್ಮ ಕೆಲಸದ ಬಗ್ಗೆ ಹೊಗಳಿಕೆ ಅಥವಾ ಮಾತನಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ನಾವೆಲ್ಲರೂ ನಮ್ಮ ನಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿದ್ದೇವೆ. ನಮ್ಮಲ್ಲಿ ಯಾರೂ ಪರಸ್ಪರ ಅಭಿಮಾನಿ ಇಲ್ಲ. ನಾವೆಲ್ಲರೂ ಒಬ್ಬರನೊಬ್ಬರು ಕ್ಲಾಸ್ ತೆಗೆದುಕೊಳ್ಳುತ್ತೇವೆ. ನನ್ನ ತಂದೆ ಉತ್ತಮವಾದ ಕೆಲಸ ಮಾಡಿದ್ದಾರೆ ಎಂದು ನನ್ನ ಮಕ್ಕಳು ಭಾವಿಸುವುದಿಲ್ಲ.

ಹಾಗೆಯೇ ನಾನು ಕೂಡ ಸೋನಮ್ ಹಾಗೂ ರೀಹಾ ಕೆಲಸ ಮಾಡಿರುವುದರ ಬಗ್ಗೆ ಹೊಗಳಿಕೆ ಮಾತನಾಡುವುದಿಲ್ಲ ಎಂದು ಅನಿಲ್ ಕಪೂರ್ ತಿಳಿಸಿದ್ದಾರೆ. ಅಲ್ಲದೇ ನನ್ನ ಹಲವು ಚಿತ್ರಗಳನ್ನು ನನ್ನ ಮಕ್ಕಳು ವೀಕ್ಷಿಸಿಲ್ಲ ಎಂದು ಇದೇ ವೇಳೆ ತಿಳಿಸಿದರು.

ನನ್ನ ಮಗ ಹರ್ಷವರ್ಧನ್ ನಾನು ಮಾಡುವ ಕೆಲಸ ನೋಡಿದ್ದಾನೆ. ಆತ ವಿಭಿನ್ನ ಚಿತ್ರಗಳನ್ನು ಹಾಗೂ ಶಾಲೆಗಳನ್ನು ಸೇರಲು ಬಯಸುತ್ತಾನೆ. ಅನಿಲ್ ಕಪೂರ್ ಅಭಿನಯದ ಮುಂಬರುವ ಚಿತ್ರ 24ನ್ನು ಟೀಸರ್ ಲಾಂಚ್ ವೇಳೆ ಈ ಮಾತನ್ನು ಹೇಳಿದ್ದಾರೆ.

Comments are closed.