ಹರಾರೆ : ಆತಿಥೇಯ ಜಿಂಬಾಬ್ವೆ ಎದುರಿನ ಎರಡನೇ ಟಿ-20 ಪಂದ್ಯವನ್ನು ಭಾರತ ಹತ್ತು ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ ಮತ್ತು ಆ ಮೂಲಕ ಸರಣಿಯಲ್ಲೀಗ ಸಮಬಲವನ್ನು ಸ್ಥಾಪಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ್ದ ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 99 ರನ್ ಮಾಡಿತ್ತು.
ಇದಕ್ಕೆ ಉತ್ತರವಾಗಿ ಭಾರತ 13.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 103 ರನ್ ಬಾರಿಸಿ ಪಂದ್ಯವನ್ನು ಜಯಿಸಿತು.
ಮೊದಲ ಟಿ-20 ಪಂದ್ಯವನ್ನು ಅತ್ಯಲ್ಪ ರನ್ನುಗಳ ಅಂತರದಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿದ್ದ ಭಾರತ, ಇಂದಿನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಗೆ ದಯನೀಯ ಸೋಲುಣಿಸಿ ಮುಯ್ಯಿ ತೀರಿಸಿತು.
ಭಾರತದ ಮನ್‌ದೀಪ್ ಸಿಂಗ್ 40 ಎಸೆತಗಳಲ್ಲಿ ಆಜೇಯ 52 ರನ್ ಬಾರಿಸಿದರೆ ಕರ್ನಾಟಕದ ಕೆ ಎಲ್ ರಾಹುಲ್ 40 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದರು.
ಜಿಂಬಾಬ್ವೆಯ ಬ್ಯಾಟಿಂಗ್‌ನಲ್ಲಿ ಭಾರತದ ಮುಂಚೂಣಿ ಎಸೆಗಾರನಾಗಿರುವ ಬಿ ಬಿ ಸ್ರಾನ್ ಕೇವಲ 10 ರನ್ ವೆಚ್ಚಕ್ಕೆ ನಾಲ್ಕು ವಿಕೆಟ್ ಕಿತ್ತರು. ಬುಮ್ರಾಹ್ 11ರನ್ ವೆಚ್ಚಕ್ಕೆ 3 ವಿಕೆಟ್ ಕಿತ್ತರು. ಕುಲಕರ್ಣಿ ಮತ್ತು ಚಾಹಾಲ್ ತಲಾ 1 ವಿಕೆಟ್ ಪಡೆದರು.
-ಉದಯವಾಣಿ
Comments are closed.