ಮನೋರಂಜನೆ

ನಟನನ್ನು ಪ್ರೀತಿ ಮಾಡುವುದೆಂದರೆ ಸುಲಭದ ಕೆಲಸವಲ್ಲ: ಸೋಹಾ ಅಲಿ ಖಾನ್

Pinterest LinkedIn Tumblr

sohaದೆಹಲಿ: ಬಾಲಿವುಡ್ ನಟಿ ಸೋಹಾ ಅಲಿ ಖಾನ್ ನಟ ಕುನಾಲ್ ಅವರನ್ನು ವಿವಾಹವಾಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸೋಹಾ ಅಲಿ ಖಾನ್, ನಟನನ್ನು ಪ್ರೀತಿ ಮಾಡುವುದೆಂದರೆ ಸುಲಭದ ಕಾರ್ಯವಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅನುಕೂಲಗಳು ಹಾಗೂ ಅನಾನೂಕೂಲಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಸೋಹಾ ಅಲಿ ಖಾನ್ ನಟ ಕುನಾಲ್ ಅವರನ್ನು 2014 ಜುಲೈ 14ರಲ್ಲಿ ಎಂಗೇಜಮೆಂಟ್ ಮಾಡಿಕೊಂಡಿದ್ದರು. ಬಳಿಕ 2015ರಲ್ಲಿ ಇಬ್ಬರು ಮದುವೆಯಾಗಿದ್ದರು. ಇದೇ ವರ್ಷ ಇಬ್ಬರು ಡೈವೋರ್ಸ ನೀಡಲಿದ್ದಾರೆ ಎಂಬ ವದಂತಿ ಕೂಡ ಹರಡಿತ್ತು.

ಈ ಬಗ್ಗೆ ಶೇರ್ ಮಾಡಿರುವ ಸೋಹಾ ಅಲಿ ಖಾನ್, ಮದುವೆ ಕುರಿತು ತನ್ನ ತಾಯಿಯ ಎದುರು ಪ್ರಸ್ತಾಪ ಮಾಡಿದಾಗ ತನ್ನ ನಿರ್ಧಾರದ ಬಗ್ಗೆ ನನ್ನ ತಾಯಿ ಶರ್ಮಿಳಾ ಠಾಗೋರ್ ಪ್ರಶ್ನೆ ಮಾಡಿದ್ದರು. ಇದು ಆ ಸಂದರ್ಭದಲ್ಲಿ ತುಂಬಾ ಕಷ್ಟಕರವಾಗಿತ್ತು ಎಂದು ಸೋಹಾ ಅಲಿ ಬಿಚ್ಚಿಟ್ಟಿದ್ದಾರೆ.

ನೀನು ನಟನನ್ನು ಯಾಕೆ ಮದುವೆಯಾಗುತ್ತಿದ್ದೀಯಾ? ಮುಂದೆ ನಿನಗೆ ಕಷ್ಟವಾಗಲಿದೆ ಎಂದು ನನ್ನ ತಾಯಿ ಶರ್ಮಿಳಾ ಠಾಗೋರ್ ಹೇಳಿದ್ದರು .ಆದ್ರೆ ನಾನು ಅದಾಗಲೇ ನಟ ಕುನಾಲ್ ಜತೆಗೆ ಪ್ರೀತಿಯಲ್ಲಿ ಬಿದಿದ್ದೆ, ಇದರಿಂದ ಸಾಕಷ್ಟು ಅನುಕೂಲಗಳು ಹಾಗೂ ಅನಾನೂಕೂಲಗಳಾಗಿವೆ ಎಂದು ಸೋಹಾ ಅಲಿ ಖಾನ್ ತಿಳಿಸಿದರು.

ಇದೇ ವೇಳೆ ಚಿತ್ರಗಳಲ್ಲಿ ರೋಮ್ಯಾನ್ಸ್ ವಿಷಯದ ಬಗ್ಗೆ ಮಾತನಾಡಿರುವ ಅವರು ಆನ್ ಸ್ಕ್ರೀನ್ ಮೇಲೆ ನಟರ ಜತೆಗೆ ರೋಮ್ಯಾನ್ಸ್ ಮಾಡುವುದೆಂದರೆ ಓಕೆ.. ನಮಗೆ ನಮ್ಮ ಬಗ್ಗೆ ತಿಳಿದಿದೆ. ಆದ್ದರಿಂದ ನಮಗೆ ಆನ್ ಸ್ಕ್ರೀನ್ ಮೇಲೆ ಬೇರೆಯೊಬ್ಬರ ಜತೆಗೆ ರೋಮ್ಯಾನ್ಸ್ ಮಾಡುವವುದೆಂದರೆ ನಿಮಗೆ ಇದು ರೋಮ್ಯಾನ್ಸ್ ಅಲ್ಲ ಎಂದು ಭಾಸವಾಗುತ್ತದೆ ಎಂದು ತಿಳಿಸಿದರು.

ಇನ್ನೂ ಸೋಹಾ ಅಲಿ ಖಾನ್ ‘ದಿ ತಾರಾ ಶರ್ಮಾ’ ಶೋ ಮೇಲೆ ತಮ್ಮ ವೈಯಕ್ತಿಕ ಜೀವನದ ಕೆಲ ಅಂಶಗಳನ್ನು ಸೋಹಾ ಬಿಚ್ಚಿಡಲಿದ್ದಾರೆ. ಮದುವೆ, ಕುಟುಂಬ , ಕೆರಿಯರ್ ಕುರಿತು ಹೇಳಲಿದ್ದಾರೆ. ಈ ಶೋ ಹೋಸ್ಟ್ ಆಗಿ ನಟಿ ತಾರಾ ಶರ್ಮಾ ಅವರು ಕಾಣಿಸಿಕೊಂಡಿದ್ದಾರೆ.

Comments are closed.