ಮನೋರಂಜನೆ

ಯುವ ಪ್ರತಿಭಾವಂತ ಗಾಯಕಿ ಕ್ರಿಸ್ಟೀನಾ ಗುಂಡೇಟಿಗೆ ಬಲಿ

Pinterest LinkedIn Tumblr

singerಅಮೇರಿಕಾ: ಎನ್‌ಬಿಸಿ ಟೆಲಿವಿಷನ್ ಚಾನೆಲ್‌ನ ‘ದ ವಾಯ್ಸ್’ ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ 22 ಹರೆಯದ ಯುವ ಪ್ರತಿಭಾವಂತ ಗಾಯಕಿ ಕ್ರಿಸ್ಟೀನಾ ಗ್ರಿಮ್ಮಿ ದುಷ್ಕರ್ಮಿಯೊಬ್ಬನ ಗುಂಡೇಟಿಗೆ ಬಲಿಯಾಗಿದ್ದಾರೆ. ಓರ್ಲ್ಯಾಂಡೊ ಪೊಲೀಸ್‌ರು ಕ್ರೀಸ್ಟಿನಾ ಸಾವನ್ನಪ್ಪಿರುವ ಬಗ್ಗೆ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. ಫ್ಲೋರಿಡಾ ರಾಜ್ಯದಲ್ಲಿ ಸಂಗೀತ ಭವನದಲ್ಲಿ ಸಂಜೆ ರಾತ್ರಿ ಕ್ರಿಸ್ಟೀನಾರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಕ್ರಿಸ್ಚೀನಾ ಎಂದಿನಂತೆ ಸಂಗೀತ ಭವನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.. ಕಾರ್ಯಕ್ರಮ ಮುಗಿಸಿದ ಬಳಿಕ ಕ್ರೀಸ್ಟಿನಾ ಅಭಿಮಾನಿಗಳಿಗೆ ಆಟೋಗ್ರಾಫ್ ಕೊಡುತ್ತಿದ್ದ ವೇಳೆ ಅವರ ಹಿಂದಿನಿಂದ ಬಂದ ಅಪರಿಚಿತ ದುಷ್ಕರ್ಮಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ.

ಆಕೆಯನ್ನು ಓರ್ಲ್ಯಾಂಡೋ ಮೆಡಿಕಲ್ ಸೆಂಟರ್‌ಗೆ ಕರೆದಕೊಂಡು ಹೋಗಲಾಯಿತ್ತಾದರೂ, ಅವರು ಕೆಲ ಗಂಟೆಗಳ ಬಳಿಕ ಕೊನೆಯುಸಿರೆಳೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನೂ ಜತೆಯಲ್ಲೇ ಇದ್ದ ಕ್ರೀಸ್ಟಿನಾ ಸಹೋದರ ದುಷ್ಕರ್ಮಿಯನ್ನು ಎದುರಿಸಲು ನಿಂತಾಗ. ಎರಡು ಬಂದೂಕುಗಳನ್ನು ಹೊಂದಿದ ಹಂತಕ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಈ ವೇಳೆ ಬೇರೆ ಯಾರಿಗೂ ಗಾಯವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.