ಮನೋರಂಜನೆ

ವಿರಾಟ್ ಕೊಹ್ಲಿ ಫ್ಯಾಮಿಲಿಯನ್ನು ರಹಸ್ಯವಾಗಿ ಭೇಟಿ ಮಾಡಿದ ಅನುಷ್ಕಾ ಶರ್ಮಾ?

Pinterest LinkedIn Tumblr

sbದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತ ತಂಡದ ಸ್ಪೋಟಕ ಬ್ಯಾಟ್ಸ್‌ಮೆನ್ ವಿರಾಟ್ ಕೊಹ್ಲಿ ಜತೆ ಸುತ್ತಾಡುವುದರ ಮೂಲಕ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಡೇಟಿಂಗ್ ಬಗ್ಗೆ ಎಲ್ಲಾ ಕಡೆ ಕೇಳಿ ಬರುತ್ತಿತ್ತು. ಮೊನ್ನೆ ಏರ್‌ಪೋರ್ಟ್‌ನಲ್ಲಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಸದ್ಯದ ಮಾಹಿತಿ ಪ್ರಕಾರ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಕುಟುಂಬದವರನ್ನು ಗುಟ್ಟಾಗಿ ಭೇಟಿ ಮಾಡಿದ್ದಾರಂತೆ.

ಮೂಲಗಳ ಪ್ರಕಾರ ಅನುಷ್ಕಾ ದೆಹಲಿಯಲ್ಲಿ ವಿರಾಟ್ ಕೊಹ್ಲಿ ಪೋಷಕರನ್ನು ಭೇಟಿಯಾಗಿದ್ದಾರಂತೆ ಎಂದು ಹೇಳಲಾಗ್ತಿದೆ.

ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಶರ್ಮಾರನ್ನು ಕಾಣಲು ಬಂದಿದ್ದ ವಿರಾಟ್, ಅಲ್ಲಿ ಅನುಶ್ಕಾ ಬುಡಾಪೆಸ್ಟ್‌ಗೆ ಮರಳುವ ಮುನ್ನ ಅನುಷ್ಕಾ ವಿರಾಟ್ ಕೊಹ್ಲಿ ಫ್ಯಾಮಿಲಿಯನ್ನು ಭೇಟಿ ಮಾಡಿದ್ದಾರಂತೆ. ಅಲ್ಲಿ ವಿರಾಟ್ ಫ್ಯಾಮಿಲಿ ಜತೆಗೆ ಕೆಲ ಕಾಲ ಕಳೆದಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನೂ ಇಂಟರ್‌ಸ್ಟಿಂಗ್ ವಿಷ್ಯ ಎಂದರೆ ವಿರಾಟ್ ಕೊಹ್ಲಿ ಕುಟುಂಬದವರನ್ನು ಅನುಶ್ಕಾ ಶರ್ಮಾ ಭೇಟಿ ಮಾಡಿದ್ಯಾಕೆ ಎಂಬುದು ಹಲವರಲ್ಲಿ ಕುತೂಹಲ ಮೂಡಿಸಿದೆ.

ಶೀಘ್ರದಲ್ಲೇ ಅನುಷ್ಕಾ ಗುಡ್ ನ್ಯೂಸ್ ನೀಡಲಿದ್ದಾರಾ? ಫೈನಲ್ ಆಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕುಟುಂಬದವರ ಮಧ್ಯೆ ಯಾವುದಾದರು ಮಾತುಕತೆಗಳು ನಡೆಯುತ್ತಿವೆಯಾ? ಸದ್ಯಕ್ಕಂತು ಅಭಿಮಾನಿಗಳು ಪ್ರಶ್ನೆಯಾಗಿದೆ. ಆದ್ರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

Comments are closed.