ಮನೋರಂಜನೆ

‘ದೋ ಲಫ್ಜೋಂಕಿ ಕಹಾನಿ’ ಕಿಸ್ಸಿಂಗ್ ದೃಶ್ಯಗಳಿಗೆ ಕತ್ತರಿ

Pinterest LinkedIn Tumblr

POಮುಂಬೈ: ‘ಉಡ್ತಾ ಪಂಜಾಬ್’ ಚಿತ್ರದ ಬೆನ್ನಲ್ಲೇ ಮುಂಬರುವ ಚಿತ್ರ ‘ದೋ ಲಫ್ಜೋಂಕಿ ಕಹಾನಿ’ ಚಿತ್ರದ ಕೆಲ ಕಿಸ್ಸಿಂಗ್ ಸೀನ್‌ಗಳನ್ನು ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆ.. ರಂದೀಪ್ ಹೂಡಾ ಮತ್ತು ಕಾಜಲ್ ಅಗರವಾಲ್ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯಗಳನ್ನು ಕಟ್ ಮಾಡಿದೆ..

18 ಸೆಕೆಂಡ್‌ಗಳಲ್ಲಿ ಇದ್ದಂತಹ ಲಿಪ್‌ಲಾಕ್ ದೃಶ್ಯಗಳನ್ನು 9 ಸೆಕೆಂಡ ವರೆಗೆ ಇಳಿಸಲಾಗಿದೆ. ಅದಲ್ಲದೇ ಚಿತ್ರದಲ್ಲಿನ ಕೆಲ ಅವ್ಯಾಚ್ಛ ಪದಗಳಿಗೂ ಕೂಡ ಕತ್ತರಿ ಹಾಕಲಾಗಿದೆ.’ಸಾಲೇ’ ಹಾಗೂ ‘ಕುತ್ತೆ’ ಪದಗಳನ್ನು ತೆಗೆದುಹಾಕಲಾಗಿದೆ..

ಆದರೆ ಸೆನ್ಸಾರ್ ಬೋರ್ಡ್ ಕೆಲ ಲಿಪ್ ಲಾಕ್ ದೃಶ್ಯಗಳನ್ನು ಕಟ್ ಮಾಡಿರುವುದರಿಂದ ಚಿತ್ರದ ನಿರ್ದೇಶಕ ದೀಪಕ್ ಅಸಮಾಧಾನರಾಗಿದ್ದಾರಂತೆ.

ಸರಬ್ಜಿತ್ ಚಿತ್ರದ ಬಳಿಕ ರಂದೀಪ್ ಹೂಡಾ ದೋ ಲಫ್ಜೋಂಕಿ ಕಹಾನಿ’ ಚಿತ್ರದಲ್ಲಿ ಅಗರವಾಲ್ ಜತೆಗೆ ಲವ್ ಡ್ಯೂಯೆಟ್ ಹಾಡಲಿದ್ದಾರೆ. ಆದ್ರೆ ಈ ಚಿತ್ರದಲ್ಲಿ ಇಬ್ಬರ ಲವ್ ಸ್ಟೋರಿಯ ಕ್ಲೈಮ್ಯಾಕ್ಸ್ ಏನಿರಬಹುದು ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಇನ್ನೂ ಚಿತ್ರ ಜೂನ್ 10ಕ್ಕೆ ರಿಲೀಲ್ ಆಗುತ್ತಿದೆ. ಚಿತ್ರದಲ್ಲಿ ಲವ್ ಸ್ಟೋರಿ ಅಸಾಮಾನ್ಯ ರೀತಿಯಲ್ಲಿ ಮೂಡಿ ಬಂದಿದ್ದು, ಇನ್ನೂ ರಂದೀಪ್ ಹೂಡಾ ಅವರ ಚಿತ್ರದ ಕ್ಯಾರೆಕ್ಟರ್ ಇಂಟರ್‌ಸ್ಟಿಂಗ್‌ಯಾಗಿದ್ದು, ಅಂಧಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾಜಲ್ ಅಗರವಾಲ್ ಲವ್ ಕಹಾನಿಯ ಕ್ಲೈಮ್ಯಾಕ್ಸ್ ಏನಿರಬಹುದು ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಇನ್ನೂ ಈ ಚಿತ್ರದಲ್ಲಿ ಅಂಧ ಪಾತ್ರಕ್ಕಾಗಿ ಕಾಜಲ್, ವರ್ಕ್‌ಶಾಪ್ ಹಾಗೂ ಸ್ಪೆಷಲ್ ಕ್ಲಾಸ್‌ಗಳಿಗೆ ಅಟೆಂಡ್ ಆಗಿದ್ದಾರು ಅವರು, ಅಂಧರನ್ನು ನೋಡಿ ನಟನೆ ಕಲಿಯುತ್ತಿದ್ದಾರಂತೆ. ಬ್ಲೈಡ್ ಜನರ ಸ್ಪೆಷಲ್ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಕಾಜಲ್ ಅಗರ್‌ವಾಲ್ ಈ ಹಿಂದೆ ತಿಳಿಸಿದ್ದರು.

ಮೊನ್ನೆ ‘ದೋ ಲಫ್ಜೋಂಕಿ ಕಹಾನಿ’ ಚಿತ್ರದ ಹಾಡುಗಳು ಮೆಲೋಡಿಯಸ್ ಆಗಿದ್ದು. ನಿಮ್ಮಗೆ ಲೈಕ್ ಆಗದೇ ಇರದು. ಕಾಜಲ್ ಅಗರ್‌ವಾಲ್‌ರ ಒಂದೊಂದು ಸ್ಟೆಪ್‌ಗಳು ನಿಮ್ಮನ್ನ ಸೆಳೆಯಲಿವೆ.

Comments are closed.