ಮನೋರಂಜನೆ

“ಕರ್ವ’ಯಶಸ್ವೀ ಪರ್ವ ಮೊದಲ ವಾರ ಬಂದಿದ್ದು 3 ಕೋಟಿ

Pinterest LinkedIn Tumblr

KARVA“ಕರ್ವ’ ಎಂಬ ಚಿತ್ರವು ಇಂಥದ್ದೊಂದು ಮ್ಯಾಜಿಕ್‌ ಮಾಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಚಿತ್ರ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಚಿತ್ರತಂಡಕ್ಕಿದ್ದಿರಬಹುದೇನೋ? ಆದರೆ, ಪ್ರೇಕ್ಷಕರು ಸಹ ಅದೇ ಮಾತು ಹೇಳಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈಗ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಅಂದಹಾಗೆ, ಈ ಚಿತ್ರ ಇದುವರೆಗೂ ಎಷ್ಟು ಗಳಿಸಿದೆ ಗೊತ್ತಾ? ಕಳೆದ ಶುಕ್ರವಾರದವರೆಗೂ ಎರಡು ಕೋಟಿ 78 ಲಕ್ಷವಾಗಿದೆ ಎಂದು ಲೆಕ್ಕ ಕೊಡುತ್ತಾರೆ ನಿರ್ಮಾಪಕ ಕೃಷ್ಣ ಚೈತನ್ಯ.

ಚಿತ್ರದ ಬಗ್ಗೆ ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದರಿಂದ, “ಕರ್ವ’ ಚಿತ್ರದ ನಿರ್ಮಾಪಕರಷ್ಟೇ ಅಲ್ಲ, ಇಡೀ ಚಿತ್ರತಂಡ ಬಹಳ ಖುಷಿಯಾಗಿದೆ. ಈ ಖುಷಿಯನ್ನು ಚಿತ್ರತಂಡದವರೆಲ್ಲಾ ಹಂಚಿಕೊಂಡರು. ಅದೇ ಸಂದರ್ಭದಲ್ಲಿ ನಿರ್ಮಾಪಕರು, ಚಿತ್ರದ ಮೊದಲ ವಾರದ ಗಳಿಗೆ 2.78 ಕೋಟಿಯಾಗಿದೆ ಎಂಬ ವಿಷಯವನ್ನು ಹೊರಹಾಕಿದರು.

ಹಾಗಾದರೆ, ಚಿತ್ರಕ್ಕೆ ಹಾಕಿರುವ ಬಂಡವಾಳವಾದರೂ ಎಷ್ಟು ಎಂದರೆ ನಾಲ್ಕು ಕೋಟಿ ಎಂಬ ಉತ್ತರ ಅವರಿಂದ ಬರುತ್ತದೆ. ಇದು ಸ್ವಲ್ಪ ಜಾಸ್ತಿಯಾಯಿತು ಎಂದು ಚಿತ್ರ ನೋಡಿದವರಿಗೆ ಅನಿಸಬಹುದು. ಏಕೆಂದರೆ, ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳೂ ಇಲ್ಲ ಮತ್ತು ತೆರೆಯ ಮೇಲೆ ಅಷ್ಟೊಂದು ಖರ್ಚು ಸಹ ಕಾಣುವುದಿಲ್ಲ. ಹಾಗಾಗಿ ನಾಲ್ಕು ಕೋಟಿ ಸ್ವಲ್ಪ ಜಾಸ್ತಿಯಾಯಿತು ಎಂದನಿಸಬಹುದು. ಆದರೂ ಮೊದಲ ವಾರದಲ್ಲೇ 2.78 ಕೋಟಿ ಬಂದಿರುವುದರಿಂದ, ಇನ್ನೊಂದೆರೆಡು ವಾರಗಳಲ್ಲಿ ನಿರ್ಮಾಪಕರು ಫ‌ುಲ್‌ ಸೇಫ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು “ಕರ್ವ’ ಚಿತ್ರದ ಕೊನೆಗೆ, ಚಿತ್ರ ಮುಂದುವರೆಯಲಿದೆ ಎಂಬ ಸಂದೇಶ ಬರುತ್ತದೆ. ಹಾಗಾದರೆ, ಚಿತ್ರದ ಮುಂದುವರೆದ ಭಾಗ ಯಾವಾಗ ಬರಬಹುದು ಎಂದರೆ, ಸದ್ಯಕ್ಕೆ ಚಿತ್ರದ ಒನ್‌ಲೈನ್‌ ತಯಾರಾಗಿದೆಯಂತೆ. ಅದನ್ನು ಚಿತ್ರಕಥೆ ಮಾಡುವುದಕ್ಕೆ ಇನ್ನಷ್ಟು ಸಮಯ ಬೇಕಂತೆ. ಅದೆಲ್ಲಾ ಮುಗಿದ ಮೇಲೆ ಚಿತ್ರ ಶುರುವಾಗಲಿದೆಯಂತೆ.

ಅಂದಹಾಗೆ, ಮುಂದುವರೆದ ಭಾಗದ ಹೆಸರು “ಕರ್ವ 2′ ಎಂದಾಗಿರುತ್ತದಂತೆ ಮತ್ತು ಆ ಚಿತ್ರದಲ್ಲೂ ಇದೇ ತಂಡ ಮುಂದುವರೆಯಲಿದೆಯಂತೆ.
-ಉದಯವಾಣಿ

Comments are closed.