ಮನೋರಂಜನೆ

ರಾಝ್ 4 ಚಿತ್ರದಲ್ಲಿ ಕೃತಿ ಕರಬಂಧ ಬೋಲ್ಡ್ ನಟನೆ

Pinterest LinkedIn Tumblr

Kriti-Kharbandaನಿರ್ದೇಶಕ ವಿಕ್ರಮ್ ಭಟ್ ನಿರ್ದೇಶನದ ರಾಝ್ ಸರಣಿಯ ರಾಝ್ 4 ರಲ್ಲಿ ಕೃತಿ ಕರಬಂಧ ನಟಿಸುತ್ತಿರುವುದು ತಿಳಿದ ವಿಚಾರವೇ.
ರಾಝ್ 4 ಚಿತ್ರಕ್ಕಾಗಿ ರೋಮೆನಿಯಾದಲ್ಲಿ ಸತತ 60 ದಿನಗಳ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿರುವ ಕೃತಿ ಕರಬಂಧ ರಾಝ್ 4 ಚಿತ್ರದ ಕುರಿತಾದ ಬಿಚ್ಚು ನುಡಿ.
ರಾಝ್ 4 ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಚಿತ್ರಕ್ಕಾಗಿ ಇಷ್ಟೋಂದು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನನ್ನ ನಿರ್ಧಾರ ನಿಜಕ್ಕೂ ಆಶ್ಚರ್ಯಕರ. ಇದೇ ಮೊದಲ ಬಾರಿಗೆ ಹಾರರ್ ಥ್ರಿಲ್ಲಿಂಗ್ ಕಹಾನಿಯಲ್ಲಿ ನಟಿಸುತ್ತಿದ್ದು, ನಿಗೂಢ ಭಾವನೆ ವಾಸ್ತವವಾಗಿ ಮೂಡಿಬಂದಿದೆ. ನನ್ನ ಸಿನಿ ಜೀವನದಲ್ಲಿ ಈ ರೀತಿಯ ಚಿತ್ರದಲ್ಲಿ ನಾನೆಂದು ನಟಿಸಿರಲಿಲ್ಲ ಎಂದು ಕೃತಿ ಕರಬಂಧ ಹೇಳಿದ್ದಾರೆ.
ಕಿಸ್ಸಿಂಗ್ ಬಾಯ್ ಇಮ್ರಾನ್ ಹಶ್ಮಿ ಹಾಗೂ ಗೌರವ್ ಅರೋರ ಜತೆ ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿದ್ದು, ಇದಕ್ಕೂ ಮೊದಲು ನಾನು ಯಾರೊಂದಿಗೂ ಇಷ್ಟೋಂದು ನಿಕಟವಾಗಿ ನಟಿಸಿರಲಿಲ್ಲ. ಮೊದ ಮೊದಲು ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಬೇಕಾದರೆ ವಿಚಲಿತವಾಗುತ್ತಿದೆ. ಬಳಿಕ ಪ್ರತಿಯೊಂದು ಸೀನ್ ಗಳಲ್ಲೂ ಉತ್ತಮವಾಗಿ ಅಭಿನಯಿಸಿದ್ದೇನೆ. ಮುಂದೆ ರಾಝ್ 4 ರೀತಿಯ ಚಿತ್ರಗಳ ಆಫರ್ ಗಳು ಬಂದರೆ ಸುಲಭವಾಗಿ ನಟಿಸಬಲ್ಲೆ ಎಂದು ಹೇಳಿಕೊಂಡಿದ್ದಾರೆ.
ಏಪ್ರಿಲ್ 27ರಿಂದ ನಾಗಶೇಖರ್ ನಿರ್ದೇಶನ ಮಾಸ್ತಿ ಗುಡಿ ಚಿತ್ರದ ಶೂಟಿಂಗ್ ನಲ್ಲಿ ಕೀರ್ತಿ ಪಾಲ್ಗೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಹುಬ್ಬಳ್ಳಿ ಸಮೀಪದ ದಟ್ಟಾರಣ್ಯದಲ್ಲಿ ನಡೆಯಲಿದೆ. ಮಹೇಂದರ್ ನಿರ್ದೇಶನ ಪಾಪು ಚಿತ್ರ ಸದ್ಯ ಬಿಡುಗಡೆ ಹಂತದಲ್ಲಿದೆ. ಇನ್ನು ದಳಪತಿ ಚಿತ್ರದ ಚಿತ್ರೀಕರಣ ಮುಗಿಸಿರುವ ಕೀರ್ತಿ ಸದ್ಯ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ರಾಝ್ 4 ಚಿತ್ರದ ಡಬ್ಬಿಂಗ್ ಹಾಗೂ ತಮಿಳು ಚಿತ್ರವೊಂದನ್ನು ಮುಗಿಸಿ ನಂತರ ಮುಂದಿನ ಚಿತ್ರವನ್ನು ಒಪ್ಪಿಕೊಳ್ಳಲಿದ್ದಾರಂತೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟಿಯಾಗಿರುವ ಕೃತಿ ಬಾಲಿವುಡ್ ನಲ್ಲೂ ತಮ್ಮ ಚಾಪು ಮೂಡಿಸಲಿದ್ದಾರಾ ಕಾದು ನೋಡಬೇಕಿದೆ.

Write A Comment