ಮನೋರಂಜನೆ

ಪುನೀತ್‌ ಚಕ್ರವ್ಯೂಹ ಎಕ್ಸೈಟಿಂಗ್ ಆಗಿತ್ತು

Pinterest LinkedIn Tumblr

8ಸ್ಟಾರ್‌ ಸಿನಿಮಾಗಳ ನಾಯಕಿ ಎಂದೇ ಕರೆಸಿಕೊಳ್ಳುವ ರಚಿತಾ ರಾಮ್‌ ಈಗ ತುಂಬಾ ಎಕ್ಸೆ„ಟ್‌ ಆಗಿದ್ದಾರೆ. ಅದಕ್ಕೆ ಕಾರಣ “ಚಕ್ರವ್ಯೂಹ’. ಪುನೀತ್‌ ರಾಜಕುಮಾರ್‌ ನಾಯಕರಾಗಿರುವ “ಚಕ್ರವ್ಯೂಹ’ದಲ್ಲಿ ನಾಯಕಿಯಾಗಿರುವ ರಚಿತಾ ರಾಮ್‌ ಆ ಚಿತ್ರ ಹಾಗೂ ತಮ್ಮ ಕೆರಿಯರ್‌ ಬಗೆಗಿನ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಿದ್ದಾರೆ …

ಚಕ್ರವ್ಯೂಹ ಚಿತ್ರದ ಅನುಭವ?
– ಇಡೀ ಜರ್ನಿಯೇ ತುಂಬಾ ಎಕ್ಸೈಟ್‌ ಆಗಿತ್ತು. ನನಗೆ ಮೊದಲು “ಚಕ್ರವ್ಯೂಹ’ ತಂಡದಿಂದ ಫೋನ್‌ ಬಂದಾಗಲೇ ತುಂಬಾ ಖುಷಿಯಾದೆ. ಪುನೀತ್‌ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಕೂಡಾ ಖುಷಿಯ ವಿಚಾರ. ಇಡೀ ತಂಡ ತುಂಬಾ ಪ್ರೊಫೆಶನಲ್‌ ಆಗಿತ್ತು. ಅದರಲ್ಲೂ ನಿರ್ಮಾಣ ಸಂಸ್ಥೆ ಸೂಪರ್‌. ನಿರ್ದೇಶಕರಿಂದ ಹಿಡಿದು ತಂಡದ ಪ್ರತಿಯೊಬ್ಬರು ಕೂಡಾ ಸಿನಿಮಾ ಚೆನ್ನಾಗಿ ಬರಲು ಶ್ರಮಿಸುತ್ತಿದ್ದರು. ನನಗಂತೂ “ಚಕ್ರವ್ಯೂಹ’ ಒಂದು ಒಳ್ಳೆಯ ಅನುಭವ ಕೊಟ್ಟ ಸಿನಿಮಾ.

ನಿಮ್ಮ ಪಾತ್ರದ ಬಗ್ಗೆ ಹೇಳಿ?
– ತುಂಬಾ ಬಬ್ಲಿ ಪಾತ್ರ. ನಾಯಕನ ಗೋಳೊಯ್ದುಕೊಳ್ಳುವ ಪಾತ್ರ. ನಾಯಕನಿಂದ ಬೈಸಿಕೊಳ್ಳೋ ರೇಂಜ್‌ಗೆ ಕಾಟ ಕೊಡೋ ಪಾತ್ರವದು. ಪಾತ್ರ ಎಷ್ಟು ಬಬ್ಲಿಯಾಗಿದೆಯೋ ಅಷ್ಟೇ ಪರ್‌ಫಾರ್ಮೆನ್ಸ್‌ಗೆ ಅವಕಾಶವಿದೆ. ಈ ಹಿಂದಿನ ನನ್ನ ಸಿನಿಮಾಗಳ ಪಾತ್ರಗಳಿಗೆ ಹೋಲಿಸಿದರೆ ಅವೆಲ್ಲಕ್ಕಿಂತ ಒಂದು ಮಟ್ಟ ಹೆಚ್ಚೇ ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರ “ಚಕ್ರವ್ಯೂಹ’ದಲ್ಲಿ ಸಿಕ್ಕಿದೆ. ನನ್ನ ಪಾತ್ರದ ಬಗ್ಗೆ ನನಗೆ ಖುಷಿ ಇದೆ.

ಪುನೀತ್‌ ಜೊತೆ ನಟಿಸಿದ ಅನುಭವ ಹೇಗಿತ್ತು?
– ಅವರು ತುಂಬಾ ಒಳ್ಳೆಯ ವ್ಯಕ್ತಿ. ಸಖತ್‌ ಸಿಂಪಲ್‌. ತುಂಬಾ ಸಪೋರ್ಟಿವ್‌ ಕೂಡಾ. ಅವರ ಜೊತೆ ನಟಿಸುವ ಕಲಾವಿದರಿಗೂ ಪ್ರತಿಹಂತದಲ್ಲೂ ಪ್ರೋತ್ಸಾಹ ನೀಡುತ್ತಾರೆ. ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ.

8 ಸಿನಿಮಾಗಳಲ್ಲಿ ತುಂಬಾ ಖುಷಿ ಕೊಟ್ಟ ಪಾತ್ರ?
– ಎಲ್ಲಾ ಪಾತ್ರಗಳು ಒಂದೊಂದು ರೀತಿಯಲ್ಲಿ ಖುಷಿ ಕೊಟ್ಟಿವೆ. ಅದರಲ್ಲೂ ಮೊದಲ ಸಿನಿಮಾ “ಬುಲ್‌ ಬುಲ್‌’ ಮರೆಯುವಂತಿಲ್ಲ. ಆ ಸಿನಿಮಾದಲ್ಲಿ ನನ್ನ ಪಾತ್ರಕ್ಕೂ ತುಂಬಾ ಪ್ರಾಮುಖ್ಯತೆ ಇತ್ತು. ಇಡೀ ಸಿನಿಮಾದುದ್ದಕ್ಕೂ ನನ್ನ ಪಾತ್ರ ಸಾಗಿ ಬಂದಿತ್ತು. ತುಂಬಾ ತೃಪ್ತಿ ಕೊಟ್ಟ ಸಿನಿಮಾವದು. ಅದು ಬಿಟ್ಟರೆ ಪ್ರತಿಯೊಂದು ಸಿನಿಮಾದಲ್ಲೂ ನಾನು ಖುಷಿಪಟ್ಟಿದ್ದೇನೆ. ಕೆಲಸ ಕಲಿತಿದ್ದು “ರನ್ನ’ದಲ್ಲಿ ಎಂದರೆ ತಪ್ಪಲ್ಲ. ಸಣ್ಣ ಸಣ್ಣ ಅಂಶಗಳ ಬಗ್ಗೆಯೂ ಅಲ್ಲಿ ತಿಳಿದುಕೊಂಡಿದ್ದೇನೆ. “ಪುಷ್ಪಕ ವಿಮಾನ’ದ ಪಾತ್ರವನ್ನು ನಾನು ಎಂಜಾಯ್‌ ಮಾಡಿದ್ದೇನೆ. ಇಲ್ಲಿವರೆಗಿನ ನನ್ನ ಜರ್ನಿ ಬಗ್ಗೆ ಖುಷಿ ಇದೆ.

ಸ್ಟಾರ್‌ ಸಿನಿಮಾಗಳಿಗಷ್ಟೇ ಸೀಮಿತವಾಗುತ್ತಿದ್ದೀರಿ?
– ಎಲ್ಲರಿಗೂ ಇಂತಹ ಅವಕಾಶ ಸಿಗಲ್ಲ. ನಮ್ಮ ಸಿನಿಮಾದಲ್ಲಿ ನೀನಿರಬೇಕು ಎಂದು ಕೇಳಿದಾಗ ನಾನು ಬೇಡ ಅನ್ನಲ್ಲ. ಸಿಕ್ಕಿದ ಒಳ್ಳೆಯ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇನಷ್ಟೇ.

ಹಾಗಾದರೆ ಹೊಸಬರ ಸಿನಿಮಾಗಳಲ್ಲಿ ನಟಿಸಲ್ವಾ?
– ಆ ತರಹ ಏನೂ ಇಲ್ಲ. ನನಗೆ ಇಷ್ಟವಾದರೆ ನಟಿಸುತ್ತೇನೆ. ಒಂದು ಸಿನಿಮಾ ಒಪ್ಪಿಕೊಳ್ಳುವ ಮುನ್ನ ನನಗೆ ಐದು ಅಂಶಗಳು ಮುಖ್ಯವಾಗುತ್ತವೆ. ಕಥೆ, ಅದರಲ್ಲಿನ ನನ್ನ ಪಾತ್ರ, ನಿರ್ಮಾಣ ಸಂಸ್ಥೆ, ನಿರ್ದೇಶಕ ಹಾಗೂ ಹೀರೋ. ಈ ಎಲ್ಲವೂ ನನಗೆ ಓಕೆ ಎನಿಸಿದರೆ ನಾನು ನಟಿಸುತ್ತೇನೆ. ಸುಖಾಸುಮ್ಮನೆ ಇದ್ದಬದ್ದ ಸಿನಿಮಾ ಒಪ್ಪಿಕೊಂಡು ನಾಳೆ ನನ್ನ ಕೆರಿಯರ್‌ ಬಿದ್ದರೆ ಮೇಲೆತ್ತಲು ಇಲ್ಲಿ ಯಾರೂ ಬರೋದಿಲ್ಲ. ನಮ್ಮ ಕೆರಿಯರ್‌ ಅನ್ನು ನಾವೇ ನೋಡಿಕೊಳ್ಳಬೇಕು.

ಉದಯವಾಣಿ

Write A Comment