ಮನೋರಂಜನೆ

ಕಿರುತೆರೆಗೆ ರಘು ಮುಖರ್ಜಿ ಸವಾರಿ

Pinterest LinkedIn Tumblr

Raghu-Mukharjiನಟ ರಘುಮುಖರ್ಜಿ ಇದೇ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಅದೂ ರಿಯಾಲಿಟಿ ಷೋ ನಿರೂಪಕರಾಗಿ ಎಂಬುದು ವಿಶೇಷ. ಅಂದಹಾಗೆ, ಸುವರ್ಣ ವಾಹಿನಿ ಹೊಸದೊಂದು ರಿಯಾಲಿಟಿ ಷೋ ಶುರುಮಾಡುತ್ತಿದೆ. ಆ ರಿಯಾಲಿಟಿ ಷೋ ಹೆಸರು “ಆ್ಯಕ್ಷನ್‌ ಸ್ಟಾರ್‌’. ಇಲ್ಲಿ ಆ್ಯಕ್ಷನ್‌ ಎಂದಾಕ್ಷಣ, ಯುವಕರ ನೆನಪಾಗೋದು ಸಹಜ. ಆದರೆ, ಕಿರುತೆರೆ ಇತಿಹಾಸದಲ್ಲಿ ಮೊದಲ ಸಲ ಯುವತಿಯರ
ಸ್ಟಂಟ್‌ ರಿಯಾಲಿಟಿ ಶೋ ನಡೆಸುವ ಮೂಲಕ ಸುವಣರ ವಾಹಿನಿ ಹೊಸದೊಂದು ಕಾರ್ಯಕ್ರಮ ಕೊಡಲು ಮುಂದಾಗಿದೆ.

ಮಾರ್ಚ್‌ 19 ರಿಂದ ಶನಿವಾರ ಹಾಗು ಭಾನುವಾರ ರಾತ್ರಿ 7.30 ಕ್ಕೆ ಈ ಷೋ ಪ್ರಸಾರವಾಗಲಿದೆ. ಈ ಷೋನಲ್ಲಿ ರಾಜ್ಯದ 10 ಬಲಿಷ್ಠ ಯುವತಿಯರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಷೋನಲ್ಲಿ ಪಾಲ್ಗೊಳ್ಳುವ ಯುವತಿಯರ ಮಾನಸಿಕ ಮತ್ತು ದೈಹಿಕ ಸಧೃಡತೆ ಬಿಂಬಿಸುವುದು ಈ ರಿಯಾಲಿಟಿ ಷೋನ ಉದ್ದೇಶ. ಪ್ರತಿ ಸಂಚಿಕೆಯಲ್ಲೂ ಸ್ಪರ್ಧಿಗಳು ಮೈ ರೋಮಾಂಚನಕಾರಿಯಾಗುವಂತಹ ಟಾಸ್ಕ್ಗಳನ್ನು ಎದುರಿಸಲಿದ್ದಾರೆ.

ಇದು ಒಂದೇ ಸೆಟ್‌ನಲ್ಲಿ ನಡೆಯುವ ರಿಯಾಲಿಟಿ ಷೋ ಅಲ್ಲ. ನಾಡಿನ ವಿವಿಧ ಪ್ರದೇಶಗಳಲ್ಲಿ ರಿಸ್ಕೀ ಸ್ಟಂಟ್ಸ್‌ ನಡೆಸುವ ಷೋ. ಇಲ್ಲಿ ಸ್ಪರ್ಧಿಗಳ ಸ್ಟಂಟ್‌ ಹಾಗು ಸಾಮರ್ಥ್ಯ ನೋಡಿ ವೀಕ್ಷಕರು ನೀಡುವ ಮತಗಳ ಮೂಲಕ ಒಬ್ಬೊಬ್ಬ ಸ್ಪರ್ಧಿಯನ್ನು ಷೋನಿಂದ ಹೊರಗೆ ಕಳುಹಿಸಲಾಗುವುದು.
ಕೊನೆಗೆ ಯಾರು ಉಳಿಯುತ್ತಾರೋ, ಅವರೇ “ಆ್ಯಕ್ಷನ್‌ ಸ್ಟಾರ್‌’. ಈ ಕಾರ್ಯಕ್ರಮ ಮೂಲಕ
ಕೊನೆಗೆ ಉಳಿಯುವ ಸ್ಪರ್ಧಿ ಕರ್ನಾಟಕದ ಸ್ಟ್ರಾಂಗೆಸ್ಟ್‌ ಗರ್ಲ್ ಎಂಬ ಹೆಸರು ಪಡೆಯುತ್ತಾರೆ. ಒಟ್ಟಾರೆ,
ರಘು ಮುಖರ್ಜಿ ಮೊದಲ ಸಲ ನಿರೂಪಕರಾಗಿ ಈ “ಆ್ಯಕ್ಷನ್‌ ಸ್ಟಾರ್‌’ ರಿಯಾಲಿಟಿ ಷೋ
ನಡೆಸಿಕೊಡುತ್ತಿದ್ದು, ಯುವತಿಯರ ಮನಸ್ಸನ್ನು ಗೆಲ್ಲುತ್ತೆ ಎಂಬ ನಂಬಿಕೆ ವಾಹಿನಿಯದ್ದು.
-ಉದಯವಾಣಿ

Write A Comment