ಅಂತರಾಷ್ಟ್ರೀಯ

ಐಸೀಸ್ ಉಗ್ರ ಸಂಘಟನೆ ಬಗ್ಗೆ ಟೀಕಿಸಿದ ಬಾಯಿಗೆ ಹೊಲಿಗೆ ಹಾಕ್ತಾರೆ ಹುಷಾರ್ ..!

Pinterest LinkedIn Tumblr

isiಬಾಗ್ದಾದ್, ಮಾ.17- ಮಾಧ್ಯಮಗಳ ಮುಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಬಗ್ಗೆ ಅತಿಯಾಗಿ ಮಾತನಾಡಿದ್ದ ಎಂಬ ಒಂದೇ ಕಾರಣಕ್ಕಾಗಿ ಯುವಕನೊಬ್ಬನ ಬಾಯಿಗೆ ಹೊಲಿಗೆ ಹಾಕಿರುವ ವಿಲಕ್ಷಣ ಘಟನೆ ಸಿರಿಯಾದಲ್ಲಿ ನಡೆದಿದೆ. ಅಹಮ್ಮದ್ ಅಲ್ ರಮದನ್ ಎಂಬ ಯುವಕನ ಬಾಯಿಗೆ ಹೊಲಿಗೆ ಹಾಕಿ ನಗರದಲ್ಲಿ ಆತನ ಮೆರವಣಿಗೆಯನ್ನೂ ಸಹ ಮಾಡಲಾಗಿದೆ. ಯಾರಾದರೂ ಇನ್ನು ಮುಂದೆ ಐಸೀಸ್ ಸಂಘಟನೆ ಬಗ್ಗೆ ಮಾಧ್ಯಮಗಳ ಮುಂದೆ ಅತಿಯಾಗಿ ಮಾತನಾಡಿದರೆ ಎಲ್ಲರಿಗೂ ಇದೇ ಗತಿ ಎಂದು ಎಚ್ಚರಿಸಲಾಗಿದೆ.

ಸಿರಿಯಾ ವೆಬ್‌ಸೈಟ್‌ನಲ್ಲಿ ಇದು ಹರಿದಾಡುತ್ತಿದ್ದು, ಯುವಕನ ಬಾಯಿಗೆ ಹೊಲಿಗೆ ಹಾಕಲಾಗಿದೆ. ಪ್ರತಿಯೊಬ್ಬರೂ ಐಸೀಸ್ ಸಂಘಟನೆ ಹಾಗೂ ಅದರ ಕಾರ್ಯ ಶೈಲಿಯನ್ನು ಒಪ್ಪಿಕೊಳ್ಳಬೇಕು. ಟೀಕಿಸಿದರೆ ಇದೇ ಗತಿ ಕಾದಿದೆ ಎಂದು ಉಗ್ರರು ಗುಡುಗಿದ್ದಾರೆ. ಮನೆಯಲ್ಲಿ ಅಡಗಿ ಕುಳಿತಿದ್ದ ಯುವಕನನ್ನು ಎಳೆದುಕೊಂಡು ಹೋಗಿ ಬಾಯಿಗೆ ಹೊಲಿಗೆ ಹಾಕಲಾಯಿತು. ತದನಂತರ ಜೀಪಿನಲ್ಲಿ 10ಕ್ಕೂ ಹೆಚ್ಚು ಉಗ್ರರು ಮೆರವಣಿಗೆ ನಡೆಸಿದರೆಂದು ಹೆಸರು ಹೇಳಲಿಚ್ಚಿಸದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಸಿರಿಯಾದಲ್ಲಿ ಇಂತಹ ವಿಲಕ್ಷಣ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಇದೇ ಕಾರಣಕ್ಕಾಗಿ ಕೆಲವರನ್ನು ಬಾಯಿ ಮುಚ್ಚಿಸಲು ಇಂತಹ ಕ್ರಮ ಕೈಗೊಳ್ಳಲಾಗಿತ್ತು.

Write A Comment