ಅಂತರಾಷ್ಟ್ರೀಯ

ವಿಜೇಂದರ್ ಸೋಲಿಸಲು ಹಾವಿನ ರಕ್ತ ಕುಡಿಯುತ್ತಿದ್ದಾರೆ ಈ ಬಾಕ್ಸರ್ !

Pinterest LinkedIn Tumblr

boxer

ಮ್ಯಾಂಚೆಸ್ಟರ್: ಬಾಕ್ಸಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಬಾಕ್ಸರ್ ವಿಜೇಂದರ್ ಸಿಂಗ್‍ರನ್ನು ಮಣಿಸಲು 20 ವರ್ಷದ ಹಂಗೇರಿಯ ಬಾಕ್ಸರ್ ಅಲೆಕ್ಸಾಂಡರ್ ಹೊರ್ವಾತ್ ಈಗ ಭೋಜನದ ವೇಳೆ ಹಾವಿನ ರಕ್ತವನ್ನು ಕುಡಿಯುತ್ತಿದ್ದಾರೆ.

ಮಾರ್ಚ್ 12 ರಂದು ಲಿವರ್ ಪೂಲ್ ನಲ್ಲಿ ವಿಜೇಂದರ್ ಮತ್ತು ಅಲೆಕ್ಸಾಂಡರ್ ಹೊರ್ವಾತ್ ನಡುವೆ ಬಾಕ್ಸಿಂಗ್ ನಡೆಯಲು ದಿನಾಂಕ ನಿಗದಿಯಾಗಿದೆ. ಹೀಗಾಗಿ ಈಗ ಅಭ್ಯಾಸ ನಡೆಸುತ್ತಿರುವ ಹೊರ್ವಾತ್ ಮತ್ತಷ್ಟು ಶಕ್ತಿ ಪಡೆಯಲು ಪ್ರತಿದಿನ ಭೋಜನದ ವೇಳೆ ಹಾವಿನ ರಕ್ತವನ್ನು ಕುಡಿಯುತ್ತಿರುವುದಾಗಿ ಹೇಳಿದ್ದಾರೆ.

ಹಾವಿನ ರಕ್ತದಲ್ಲಿ ಅಂಥ ವಿಶೇಷತೆ ಏನಿದೆ ಎಂದು ಕೇಳಿದರೆ, ನನ್ನ ಅಜ್ಜ, ಮುತ್ತಜ್ಜ ಕೂಡ ಹಾವಿನ ರಕ್ತವನ್ನು ಸೇವಿಸುತ್ತಿದ್ದರು.ಟರ್ಕಿ ಸೈನಿಕರನ್ನು ಸೋಲಿಸುವ ಸಲುವಾಗಿ ಹಂಗೇರಿ ಸೈನಿಕರೂ ಕೂಡ ಹಾವಿನ ರಕ್ತ ಕುಡಿದಿದ್ದರು. ನನ್ನ ಭೋಜನದಲ್ಲಿ ಹಾವಿನ ರಕ್ತವನ್ನು ಸೇರಿಸಿದರೆ ನನಗೆ ವಿಶೇಷ ಶಕ್ತಿ ಸಿಗುತ್ತದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 2015ರಲ್ಲಿ ವೃತ್ತಿಪರ ಬಾಕ್ಸಿಂಗ್ ಎಂಟ್ರಿ ಕೊಟ್ಟ ವಿಜೇಂದರ್ ಅಲ್ಲಿಂದ ಇಲ್ಲಿಯವರೆಗೆ ತಾನಾಡಿದ ಮೂರು ಪಂದ್ಯಗಳಲ್ಲಿ ಜಯಶಾಲಿಯಾಗಿದ್ದು ವಿಶ್ವದ ಬಾಕ್ಸರ್‍ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹರ್ಯಾಣ ಮೂಲದ ವಿಜೇಂದರ್ 2008ರ ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ಕಂಚು ಜಯಿಸಿದ್ದರು. 2006ರ ದೋಹಾ ಮತ್ತು 2010ರ ಗುವಾಂಗ್ ಜೌ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದಿದ್ದರು.

Write A Comment